ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್ ಭ್ರಷ್ಟಾಚಾರದ ಮತ್ತಷ್ಟು ಮಾಹಿತಿ ಬಹಿರಂಗಪಡಿಸುವೆ : ಯಡಿಯೂರಪ್ಪ

ಬೆಂಗಳೂರು: ಕಾಂಗ್ರೆಸ್‍ ನಾಯಕರು ನೀಡಿದ್ದಾರೆನ್ನಲಾದ ಕಪ್ಪ ಕಾಣಿಕೆ ವಿವರಗಳನ್ನೊಳಗೊಂಡ ಡೈರಿ ವಿವರಗಳನ್ನು ಬಿಡುಗಡೆ ಮಾಡಿ ರಾಜ್ಯದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಯಡಿಯೂರಪ್ಪ ಮತ್ತಷ್ಟು ಮಾಹಿತಿಯನ್ನು ಬಹಿರಂಗಪಡಿಸುವೆ ಎಂದು ಹೇಳಿದ್ದಾರೆ.

ಈಗಾಗಲೇ ಪಕ್ಷದ ಹೈಕಮಾಂಡ್‍ಗೆ ಕಿಕ್‍ಬ್ಯಾಕ್ ನೀಡಿರುವ ಹಲವರ ಹೆಸರುಗಳು ಮಾಧ್ಯಮಗಳ ಮೂಲಕ ಬಹಿರಂಗಗೊಂಡ ಕಾರಣ ಪಕ್ಷ ಸಾಕಷ್ಟು ಮುಜುಗರಕ್ಕೀಡಾಗಿದೆ. ಈ ಸಂದರ್ಭದಲ್ಲಿ ಇನ್ನಷ್ಟು ಮಾಹಿತಿ ಬಹಿರಂಗಪಡಿಸುವುದಾಗಿ ಯಡಿಯೂರಪ್ಪ ಬೆದರಿಕೆ ಹಾಕಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು. ಜೊತೆಗೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಎದುರಿಸಿ ತಮ್ಮ ನೈತಿಕತೆಯನ್ನು ಜನರ ಮುಂದೆ ಹೇಳಿ ಜನಾದೇಶ ಪಡೆಯಬೇಕು. ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ನೀಡಿರುವ ವಿಷಯವನ್ನು ನಾನು ಬಹಿರಂಗ ಪಡಿಸಿದ್ದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಮೇಲೆ ಮುಗಿಬಿದ್ದರು. ಡೈರಿಯಲ್ಲಿ ಹಣದ ಮೊತ್ತದ ಬಗ್ಗೆಯೂ ಉಲ್ಲೇಖ ಇರುವುದರಿಂದ ಸತ್ಯ ಒಪ್ಪಿಕೊಳ್ಳೂಬೇಕಾದ ಪರಿಸ್ಥಿತಿ ಅವರಿಗೆ ಬಂದಿದೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿ “ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿ.ಎಂ ಎಚ್.ಡಿ ಕುಮಾರಸ್ವಾಮಿ ಅವರು ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಲೂಟಿ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಬಿಜೆಪಿಯವರೂ ಕಡಿಮೆಯೇನಿಲ್ಲ. ಅವರು ಕೂಡ ಪಕ್ಷದ ಹೈಕಮಾಂಡ್‍ಗೆ ಕಪ್ಪ ನೀಡುತ್ತಾರೆ ಎಂದು ಟೀಕಿಸಿದ್ದಾರೆ.

Leave a Reply

comments

Related Articles

error: