ಮೈಸೂರು

ದಿನವಿಡೀ ಮಹಿಳೆಯರಿಗಾಗಿ ವಿವಿಧ ಆಕರ್ಷಣೆಗಳು :ಅ.6 ರಂದು ಮಹಿಳಾ ದಸರಕ್ಕಾಗಿ ವೈವಿಧ್ಯಮಯ ಸ್ಪರ್ಧೆಗಳು

ರಾಜ್ಯ( ಮಡಿಕೇರಿ),ಸೆ.28:- ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅಕ್ಟೋಬರ್ 6 ರಂದು ಭಾನುವಾರ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ 5 ನೇ ವರ್ಷದ ಮಹಿಳಾ ದಸರಾ ಆಯೋಜಿತವಾಗಿದೆ.

ಅಂದು ಬೆಳಗ್ಗೆ 10 ಗಂಟೆಯಿಂದ ಜಿಲ್ಲೆಯ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದೆ.
ಜಿಲ್ಲಾಧಿಕಾರಿ ಸೂಚನೆಯಂತೆ ಮಹಿಳಾ ದಸರಾ ಆಯೋಜನೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಅರುಂಧತಿ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ.

ಮೆಹಂದಿ ಹಾಕುವ ಸ್ಪರ್ಧೆ, ಮನೆಯಿಂದ ತಯಾರಿಸಿದ ವೈವಿಧ್ಯಮಯ ರೊಟ್ಟಿ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ, ಮಹಿಳಾ ಸಂಘಗಳಿಗೆ, ಸ್ವಸಹಾಯ ಸಂಘಗಳೂ ಸೇರಿದಂತೆ ಜಿಲ್ಲೆಯ ಮಹಿಳಾ ಸಂಘಗಳಿಗೆ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಸ್ಪರ್ಧೆ, ಬಾಂಬ್ ಇನ್ ದಿ ಸಿಟಿ, ಸಾಂಪ್ರದಾಯಿಕ ಉಡುಗೆಯಲ್ಲಿನ ಛದ್ಮವೇಷ ಸ್ಪರ್ಧೆ, ವಾಲಗತ್ತಾಟ್, ಲಗೋರಿ, ಚನ್ನಮಣೆ, ಹಗ್ಗಜಗ್ಗಾಟ, ಸೀರೆಗೆ ರೇಟ್ ನಿಗಧಿ ಸ್ಪರ್ಧೆಗಳೂ ಸೇರಿದಂತೆ ಹಲವು ಸ್ಪರ್ಧೆಗಳು ನಿಗದಿಯಾಗಿದೆ.

ಮಡಿಕೇರಿಯ ಮಹಿಳಾ ದಸರಾದ ವಿವಿಧ ಸ್ಪಧೆ9ಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ ಸಂಪಕಿ9ಸಿ – ಸವಿತಾ ರಾಕೇಶ್ (7026360963) , ವೀಣಾಕ್ಷಿ (8762303208) , ಕವಿತಾ ರಾಮ್ (9481036744) ಸವಿತಾ ಅರುಣ್ (9480003811), ಕನ್ನಿಕ ದಿನೇಶ್ ( 9449903424), ಕನ್ನಂಡ ಕವಿತಾ ( 9845647795). (ಕೆಸಿಐ,ಎಸ್.ಎಚ್)

Leave a Reply

comments

Related Articles

error: