ದೇಶಪ್ರಮುಖ ಸುದ್ದಿವಿದೇಶ

ಅಮೆರಿಕ ಜನಾಂಗೀಯ ದ್ವೇಷದ ಹತ್ಯೆ : ಆತಂಕಕ್ಕೀಡಾದ ಭಾರತೀಯ ವಿದ್ಯಾರ್ಥಿಗಳ ಪೋಷಕರು

ಹೈದರಾಬಾದ್‍ : ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಘಟನೆಗಳು ಹೆಚ್ಚಾಗುತ್ತಿರುವ ಕಾರಣ ಅಮೆರಿಕದಲ್ಲಿರುವ ತಮ್ಮ ಮಕ್ಕಳ ಪ್ರಾಣಕ್ಕೆ ಅಪಾಯವಿದೆ ಎಂದು ಭಾರತೀಯ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ಅಮೆರಿಕದ ಕನ್ಸಾಸ್ ನಗರದ ಬಾರ್‍ನಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಆಂಧ್ರ ಮೂಲದ ಶ್ರೀನಿವಾಸ್ ಎಂಬ ಸಾಫ್ಟ್‍ವೇರ್ ಎಂಜಿನಿಯರ್ ಅವರನ್ನು ಕೊಲೆ ಮಾಡಲಾಗಿದೆ. ವಾರದ ಹಿಂದೆ ಕ್ಯಾಲಿಫೋರ್ನಿಯಾದಲ್ಲಿ ವಿದ್ಯಾರ್ಥಿಯೊಬ್ಬನನ್ನು ಹತ್ಯೆ ಮಾಡಲಾಗಿತ್ತು.

ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ನಂತರ ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಭಾರತೀಯರನ್ನು ಮಾತ್ರವಲ್ಲ, ವಲಸಿಗರು ಹಾಗೂ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಭಯ-ಅಭದ್ರತೆ ಹೊಂದಿದ್ದಾರೆ. ಪ್ರತಿದಿನ ಕ್ಯಾಂಪಸ್‍ನಲ್ಲಿ ಟೀಕೆ-ಜನಾಂಗೀಯ ತಾರತಮ್ಯಕ್ಕೆ ಒಳಗಾಗುತ್ತಿದ್ದೇವೆ ಎಂದು ಕಾನ್ಸಾಸ್ ಸ್ಟೇರ್ ಯೂನಿವರ್ಸಿಟಿಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬ ವ್ಯಕ್ತಪಡಿಸಿದ್ದಾನೆ.

ಸರಣಿ ಹತ್ಯೆಗಳ ಬಗ್ಗೆ ಹೆದರಿರುವ ವಿದ್ಯಾರ್ಥಿಗಳು ಬಿಡುವಿನ ವೇಳೆಯ ಉದ್ಯೋಗ ಮಾಡಲು ಹೆದರುತ್ತಿದ್ದಾರೆ. ಅಮೆರಿಕದಲ್ಲಿನ ಜೀವನ ವೆಚ್ಚಕ್ಕೆ ಅತ್ಯಗತ್ಯವಾದ ಹಣ ಸಂಪಾದಿಸಲು ವಿದ್ಯಾರ್ಥಿಗಳು ಬಿಡುವಿನವೇಳೆಯ ಉದ್ಯೋಗ ಮಾಡುತ್ತಾರೆ. ಆದರೆ ಈಗ ಸಂಶೋಧನೆ ಸೇರಿದಂತೆ ಯಾವುದೇ ಉದ್ಯೋಗಾವಕಾಶ ನೀಡುತ್ತಿಲ್ಲ. ಒಂದು ವೇಳೆ ನಾವು ಉದ್ಯೋಗ ಮಾಡಿದರೆ ನಮ್ಮ ಮೇಲೆ ಸ್ಥಳೀಯರು ದಾಳಿ ಮಾಡುತ್ತಾರೆ. ಹೀಗಾಗಿ ನಾವು ಉದ್ಯೋಗದದಿಂದ ಹಿಂದೆ ಸರಿಯಬೇಕಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಅಮೆರಿಕದ ಜನ ವಿಶ್ವದ ಎಲ್ಲ ದೇಶದ ಜನರನ್ನೂ ವಿರೋಧಿಸಲು ಆರಂಭಿಸಿದ್ದಾರೆ. ಇಲ್ಲಿ ಭಯೋತ್ಪಾದನೆ ಒಂದೇ ವಿಷಯವಲ್ಲ, ಬದಲಾಗಿ ಸ್ಥಳೀಯರ ಉದ್ಯೋಗ ಕಸಿಯುತ್ತಿರುವ ವಲಸಿಗರ ವಿರದ್ಧದ ಅಸಹನೆಯೂ ಸೇರಿದೆ. ರಿಪಬ್ಲಿಕನ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತುಗಳು ಈ ದ್ವೇಷದ ನಡವಳಿಕೆಗೆ ಬೆಂಬಲ ನೀಡುವಂತೆ ಭಾಸವಾಗುತ್ತಿವೆ. ಜನಾಂಗಿಯ ದ್ವೇಷ ಮರುಕಳಿಸಿರುವುದರಿಂದ ಭಾರತೀಯರೂ ಸೇರಿದಂತೆ ವಲಸಿಗರು ಭಯದಲ್ಲಿ ಬದುಕುವಂತಾಗಿದೆ.

Leave a Reply

comments

Related Articles

error: