ಪ್ರಮುಖ ಸುದ್ದಿ

ಮಹಡಿಯಿಂದ ಬಿದ್ದು ಮಗು ಸಾವು : ವಿರಾಜಪೇಟೆಯಲ್ಲಿ ಘಟನೆ

ರಾಜ್ಯ( ಮಡಿಕೇರಿ) ಸೆ.29 :- ಕಟ್ಟಡದ ಎರಡನೇ ಮಹಡಿಯಿಂದ ಮೂರೂವರೆ ವರ್ಷದ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.
ಪಟ್ಟಣದ ಮಲಬಾರ್ ರಸ್ತೆಯ ಹೆಚ್.ಎಂ. ಅಪಾರ್ಟ್‍ಮೆಂಟ್‍ನಲ್ಲಿ ವಾಸವಿರುವ ಅಝರುದ್ದೀನ್-ಝಾಹಿರಾ ದಂಪತಿಗಳ ಪುತ್ರ ಜವಾದುದ್ದೀನ್ ಮೃತ ಮಗು. ಕಟ್ಟಡದ ಮೇಲೆ ಆಟವಾಡುತ್ತಿರುವಾಗ ಆಯತಪ್ಪಿ ಕಿಟಕಿಯ ಮೂಲಕ ಕೆಳಗೆ ಬಿದ್ದ ಮಗು ತೀವ್ರವಾಗಿ ಗಾಯಗೊಂಡಿತು. ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತು. ತಂದೆ ಅಝರುದ್ದೀನ್ ದುಬೈನಲ್ಲಿ ಕೆಲಸದಲ್ಲಿದ್ದಾರೆ.

Leave a Reply

comments

Related Articles

error: