ಮೈಸೂರು

ಕ್ಷುಲ್ಲಕ ಕಾರಣಕ್ಕೆ ಚಾಮುಂಡಿ ಬೆಟ್ಟದಲ್ಲಿ ಯುವಕರ ಮಾರಾಮಾರಿ : ವಿಡಿಯೋ ವೈರಲ್​

ಮೈಸೂರು,ಸೆ.30:-  ಮೈಸೂರು ದಸರಾಗೆ ನಿನ್ನೆ ವಿದ್ಯುಕ್ತ ಚಾಲನೆ ದೊರಕಿದ್ದು,  9 ದಿನಗಳ ಕಾಲ ದಸರಾ  ವೈಭವ ನಡೆಯಲಿದೆ.  ದಸರಾ ಉದ್ಘಾಟನೆ ದಿನವೇ ಚಾಮುಂಡಿ ಬೆಟ್ಟದಲ್ಲಿ ಯುವಕರ ಮಾರಾಮಾರಿ ನಡೆದಿದ್ದು, ಈ ಘಟನೆ ಸಾಂಸ್ಕೃತಿಕ ನಗರಿಯನ್ನೇ  ಬೆಚ್ಚಿ ಬೀಳಿಸಿದೆ.

ನಿನ್ನೆ  ರಾತ್ರಿ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ 10ಕ್ಕೂ ಹೆಚ್ಚು ಯುವಕರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಿಸಿದ ವೇಳೆ ಗಲಾಟೆ ಮಿತಿ ಮೀರಿದ ಕಾರಣ ಇಬ್ಬರು ಯುವಕರಿಗೆ ಕುಡಿದ ಮತ್ತಿನಲ್ಲಿದ್ದವರು ಮನಬಂದಂತೆ ಚಚ್ಚಿದ್ದಾರೆ. ಸಾರ್ವಜನಿಕರ ಎದುರಲ್ಲೇ ಈ ಮಾರಾಮಾರಿ ನಡೆದಿದೆ.

ಈ ಹೊಡೆದಾಟವನ್ನು ನೋಡಿ ಅಲ್ಲಿದ್ದ ಸ್ಥಳೀಯರು ಅಕ್ಷರಶಃ ಹೆದರಿದ್ದರು. ಅಷ್ಟೇ ಅಲ್ಲ, ತಮಗೆ ಏಟು ಬೀಳಬಹುದು ಎನ್ನುವ ಕಾರಣಕ್ಕೆ ಹೊಡೆದಾಟ ತಪ್ಪಿಸಲು ಹೆದರಿ ನಿಂತಿದ್ದರು. ಹೀಗಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಈ ಹೈಡ್ರಾಮ ನಡೆದೇ ಇತ್ತು ಎನ್ನಲಾಗಿದೆ.

ಏಟು ತಿಂದ ಯುವಕರ ಬೈಕ್​ಅನ್ನು ಕುಡಿದ ಮತ್ತಿನಲ್ಲಿದ್ದವರು ಧ್ವಂಸಗೊಳಿಸುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಕೆ.ಆರ್. ಠಾಣೆಯ ಪೋಲಿಸರು ಕೆಲವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.   ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೈಸೂರು ದಸರಾ ಸಮಯದಲ್ಲೇ ಈ ರೀತಿ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: