ಪ್ರಮುಖ ಸುದ್ದಿಮೈಸೂರು

ದಸರಾ-ಜಂಬು ಸವಾರಿ ನಿಷೇಧಿಸಲು ಆಗ್ರಹಿಸಿ ‘ಪಂಜಿನ ಮೆರವಣಿಗೆ ನಾಳೆ’

ಕರ ಪತ್ರ ಚಳುವಳಿ ಮೂಲಕ -ಪ್ರವಾಸಿಗರಿಗೆ ಜಾಗೃತಿ

ಮೈಸೂರು.ಸೆ.30: ದಸರಾ ಹಾಗೂ ಜಂಬು ಸವಾರಿಯನ್ನು ನಿಷೇಧಿಸಬೇಕೆಂದು ಮಹಿಷ ದಸರಾ ಸಮಿತಿಯಿಂದ ವಿಜಯದಶಮಿಯವರೆಗೂ ದಿನಕ್ಕೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನಾಳೆ ಅಶೋಕಪುರಂನಲ್ಲಿ ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನೆನ್ನೆ ದಸರಾ ಉದ್ಘಾಟನೆ ವೀಕ್ಷಣೆಗೆಂದು ತೆರಳಿದ್ದ ಹಲವರನ್ನು ವಿನಾಕಾರಣ ಬಂಧಿಸಿರುವುದರ ವಿರುದ್ಧದ ಕಿಡಿಕಾರಿ. ದಸರಾದಲ್ಲಿ ಅಸ್ಪ್ರಶ್ಯತೆ ತಾಂಡವಾಡಿದ್ದು ಮೂಲ ನಿವಾಸಿಗಳ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತಿಹಾಸ ತಿಳಿಯದೆ ಕೆಲ ಅಜ್ಞಾನಿಗಳಿಂದ ಮಹಿಷಾ ದಸರಾ ಆಚರಣೆಗೆ ಅಡ್ಡಿಪಡಿಸಿದ್ದು, ಅದೇ ರೀತಿ ದಸರಾ ಹಾಗೂ ಜಂಬೂ ಸವಾರಿಯನ್ನು ನಿಷೇಧಿಸಬೇಕೆಂದು ನಾವುಗಳು ಹೋರಾಟ ನಡೆಸುತ್ತೇವೆ, ಅಲ್ಲದೇ ಈ ಹಬ್ಬದ ನಿಷೇಧಕ್ಕೆ ಸಾವಿರಾರು ಜನ ಸಹಿ ಹಾಕಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.

ಷಂಡರು ಎಂದು ನಿಂಧಿಸಿದ ಪೊಲೀಸರ ಸರ್ಪಗಾವಲಿನಲ್ಲಿಯೇ ದಸರಾ ಉದ್ಘಾಟಿಸಿದ ಪ್ರತಾಪ ಸಿಂಹ ಒಬ್ಬ ಷಂಡ ಎಂದು ತೀವ್ರ ವಾಗ್ಧಾಳಿ ನಡೆಸಿ. ಇತಿಹಾಸ ಅರಿಯದ ಸಿ.ಟಿ.ರವಿಯೊಬ್ಬ ಮಾನಸಿಕ ಅಸ್ವಸ್ಥ ಅವರಿಗೆ ನಮ್ಮ ಸ್ವಂತ ಖರ್ಚಿನಲ್ಲಿಯೇ ಚಿಕಿತ್ಸೆ ನೀಡಿಸುತ್ತೇವೆ ಎಂದು ಲೇವಡಿ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣನ ವಿರುದ್ಧನು ಟೀಕಾಪ್ರಹಾರ ನಡೆಸಿದರು..

ಕರ ಪತ್ರ ಚಳುವಳಿ : ಸತ್ಯವನ್ನು ಕತ್ತಲೆಯಲ್ಲಿಟ್ಟು ಅಸತ್ಯವನ್ನು ವಿಜೃಂಭಿಸಲಾಗುತ್ತಿದ್ದು ಪುರಾಣ ಎನ್ನುವ ಅಸತ್ಯವನ್ನು ಜಾಹೀರುಗೊಳಿಸುತ್ತಿದ್ದು ಈ ಬಗ್ಗೆ ದಸರಾಗೆ ಆಗಮಿಸುವ ದೇಶ ವಿದೇಶಿ ಪ್ರವಾಸಿಗರಿಗೆ ಕರೆ ಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಸಮಿತಿಯ ಮತ್ತೋರ್ವ ಪ್ರಮುಖರಾದ ಶಾಂತರಾಜು ಮಾತನಾಡಿ, ಹಿಂದೂ ದೇವಾಲಯಗಳಲ್ಲಿ ಕಟ್ಟು ಪಾಡಿರುವ ಬಗ್ಗೆ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ತಿಳಿಸಿದ್ದು, ಆ ಕಟ್ಟುಪಾಡುಗಳ್ಯಾವುದೆಂದು ಸ್ಪಷ್ಟಪಡಿಸಲಿ, ಮಹಿಷಾ ಹಾಗೂ ಚಾಮುಂಡಿ ದಸರಾ ಬಗ್ಗೆ ಚರ್ಚೆಯಾಗಲಿ ಎಂದು ಸಚಿವ ಸೋಮಣ್ಣನವರ ಮನೆ ಬಾಗಿಲಿಗೇನು ಬಿಕ್ಷೆ ಬೇಡಲು ಹೋಗಿರಲಿಲ್ಲ. ಆದ್ರೂ ನಮ್ಮನ್ನು ತೀವ್ರ ನಿಕೃಷ್ಟವಾಗಿ ಮಾತನಾಡಿ. ಅ.8ರ ನಂತರ ಚರ್ಚಿಸೋಣ ಎಂದಿದ್ದು ಹಾಗಾದರೆ ಚರ್ಚೆ ನಂತರವೇ ದಸರಾ ಆಚರಿಸಲಿ ಎಂದು ಆಗ್ರಹಿಸಿದರು.

ಪುನೀತ್. ಅಶೋಕ್,  ಸಿದ್ದರಾಜು ಗೋಷ್ಠಿಯಲ್ಲಿ ಇದ್ದರು.(ವರದಿ: ಕೆ.ಎಂ.ಆರ್)

Leave a Reply

comments

Related Articles

error: