ಮೈಸೂರು

ವಿಜಯನಗರ ಮನೆಯೊಂದರಲ್ಲಿ ಕಳ್ಳತನ

ಮೈಸೂರು ವಿಜಯನಗರ ಎರಡನೇ ಹಂತದ ಮನೆಯೊಂದಕ್ಕೆ ಯಾರೂ ಇಲ್ಲದ ಸಮಯ ನೋಡಿ ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿಗೊಳಿಸಿದ ಘಟನೆ ನಡೆದಿದೆ.

ನಿವೃತ್ತ ಶಿಕ್ಷಕ ಚಂದ್ರೇಗೌಡ ಎಂಬವರ ಮನೆಯಲ್ಲಿಯೇ ಕಳ್ಳತನ ಕೃತ್ಯ ನಡೆದಿದೆ. ಅವರು ಮಗನ ಮದುವೆ ನಿಶ್ಚಯಿಸಿದ್ದು ಆಮಂತ್ರಣ ನೀಡಲು ತೆರಳಿದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಬೆಳಿಗ್ಗೆ 6.30ರ ಸುಮಾರಿಗೆ ಅಕ್ಕಪಕ್ಕದವರು ರಾತ್ರಿ ವಾಹನ ಬಂದ ಶಬ್ದವಾಗಿಲ್ಲ. ಆದರೆ ಬಾಗಿಲು ತೆಗೆದಿದೆಯಲ್ಲಾ ಎಂದು ಮನೆಯವರನ್ನು ಕರೆಯುತ್ತಾ ಬಂದಾಗ ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಮನೆಯವರು ಯಾರೂ ಕಂಡು ಬರಲಿಲ್ಲ ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಚಂದ್ರೇಗೌಡ ಅವರಿಗೆ ದೂರವಾಣಿಯ ಮೂಲಕ ಮಾಹಿತಿ ರವಾನಿಸಿದ್ದಾರೆ. ಅಲ್ಲದೇ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ವಿಜಯನಗರ ಠಾಣೆಯ ಇನ್ಸಪೆಕ್ಟರ್ ಗುರುಪ್ರಸಾದ್ ಸಿಬ್ಬಂದಿಗಳೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Leave a Reply

comments

Related Articles

error: