ವಿದೇಶ

ಚೀನಾದ ಕಾರ್ಖಾನೆಯಲ್ಲಿ ಅಗ್ನಿ ದುರಂತ: 21 ಮಂದಿ ದುರ್ಮರಣ

ಬೀಜಿಂಗ್, ಸೆ.30- ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 21 ಮಂದಿ ಮೃತಪಟ್ಟಿರುವ ಘಟನೆ ಪೂರ್ವ ಚೀನಾದಲ್ಲಿ ನಡೆದಿದೆ.

ಝೆಜಿಯಾಂಗ್ ಪ್ರಾಂತ್ಯದ ನಿಂಗೈ ಗ್ರಾಮದ ಕಾರ್ಖಾನೆಯೊಂದರಲ್ಲಿ ಘಟನೆ ಸಂಭವಿಸಿದೆ. ಇದು ರುಯಿಕಿ ಡೈಲಿ ನೆಸೆಸ್ಸಿಟೀಸ್ ಕಂಪನಿ ಒಡೆತನದ ಸಂಸ್ಥೆ.

ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಮೂವರ ಸ್ಥಿತಿ ಶೋಚನೀಯವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಎಂಟು ಕಾರ್ಮಿಕರನ್ನು ರಕ್ಷಿಸಲಾಗಿದೆ.

ಅಗ್ನಿ ದುರಂತ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಕಮ್ಯೂನಿಸ್ಟ್ ನಾಯಕತ್ವದ ಚೀನಾ ನಾಳೆ 70ನೇ ವರ್ಷಾಚರಣೆ ಸಂಭ್ರಮದಲ್ಲಿರುವಾಗಲೇ ಇದು ದುರಂತ ವಾರಾಂತ್ಯದ ಕಹಿ ಘಟನೆಗೆ ಕಾರಣವಾಗಿದೆ. (ಎಂ.ಎನ್)

Leave a Reply

comments

Related Articles

error: