ಪ್ರಮುಖ ಸುದ್ದಿ

ಕವಯತ್ರಿ,ಮಾರನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಹೃದಯಾಘಾತದಿಂದ ನಿಧನ

ರಾಜ್ಯ(ಹಾಸನ)ಅ.1:-   ಕವಯತ್ರಿಯಾಗಿಯೂ ಗುರುತಿಸಿಕೊಂಡಿದ್ದ , ಶಿಕ್ಷಕಿ ಚಂಗಡಿಹಳ್ಳಿ ಯಶೋಧಾ ಸಿದ್ದಣ್ಣ ಇಂದು ಬೆಳಿಗ್ಗೆ  ಸಕಲೇಶಪುರ ತಾಲೂಕು, ಬಾಳ್ಳುಪೇಟೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅವರಿಗೆ 50ವರ್ಷ ವಯಸ್ಸಾಗಿತ್ತು. ಅವರು  ಸಕಲೇಶಪುರ ತಾಲೂಕು ಮಾರನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕವಯತ್ರಿಯಾಗಿ ಗುರುತಿಸಿಕೊಂಡ ಅವರು  ಕನ್ನಡ ಸಾಹಿತ್ಯ ಪರಿಷತ್ತಿನ ಸಕಲೇಶಪುರ ತಾಲೂಕು ಘಟಕದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಲ್ಲದೇ, ತೆನೆಗಳು ಸೇರಿದಂತೆ ಹಲವು ಕವನ ಸಂಕಲಗಳನ್ನು ಹೊರತಂದಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: