ದೇಶ

ಜಮ್ಮು: ಬಸ್ ನಲ್ಲಿದ್ದ 15 ಕೆ.ಜಿಯ ಸ್ಫೋಟಕ ವಶ; ತಪ್ಪಿದ ದುರಂತ

ಜಮ್ಮು-ಕಾಶ್ಮೀರ,ಅ.1-ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ತಪ್ಪಿಸುವಲ್ಲಿ ಭದ್ರತಾ ಪಡೆಯವರು ಯಶಸ್ವಿಯಾಗಿದ್ದಾರೆ.

ಬಸ್ ನಲ್ಲಿದ್ದ 15 ಕೆ.ಜಿಯ ಭಾರೀ ಸ್ಫೋಟಕಗಳನ್ನು ಭದ್ರತಾ ಪಡೆಯವರು ವಶಪಡಿಸಿಕೊಂಡಿದ್ದಾರೆ. ಕಥುವಾ ಜಿಲ್ಲೆಯ ಬಿಲಾವರ್ ನಿಂದ ಜಮ್ಮು ನಗರಕ್ಕೆ ಬಂದಿರುವ ಬಸ್ ನಲ್ಲಿ ಈ ಭಾರೀ ಸ್ಪೋಟಕಗಳು ಪತ್ತೆಯಾಗಿದ್ದವು.

ಉಗ್ರರು ಬಸ್ ನಿಲ್ದಾಣದಲ್ಲಿ ಭಾರೀ ಪ್ರಮಾಣದಲ್ಲಿ ಭಯೋತ್ಪಾದನ ದಾಳಿ ನಡೆಸುವ ಹುನ್ನಾರ ಇದೀಗ ವಿಫಲಗೊಂಡಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಭಾರತದಲ್ಲಿ ಭೀಕರ ದಾಳಿಗೆ ಸಂಚು ರೂಪಿಸುತ್ತಿರುವ ಉಗ್ರರು ಜನನಿಬಿಡ ಪ್ರದೇಶದತ್ತ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದ್ದಾರೆ. ಈ ಹಿಂದೆ ಬಿಲಾವರ್ ಮನೆಯೊಂದರಲ್ಲಿ 40 ಕೆಜಿಯಷ್ಟು ಗನ್ ಪೌಡರ್ ಅನ್ನು ಸೇನೆ ವಶಪಡಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. (ಎಂ.ಎನ್)

Leave a Reply

comments

Related Articles

error: