
ಮೈಸೂರು
ಅ.4 : ವಿದ್ಯಾವರ್ಧಕ ಕಾಲೇಜಿನಲ್ಲಿ ‘ಭಾರತದಲ್ಲಿ ಆರ್ಥಿಕ ನಿಯಮಗಳು ಹಾಗೂ ನೈಸರ್ಗಿಕ ವಿಪತ್ತುಗಳು’ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಮೈಸೂರು,ಅ.1:- ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಭಾರತದಲ್ಲಿ ಆರ್ಥಿಕ ನಿಯಮಗಳು ಹಾಗೂ ನೈಸರ್ಗಿಕ ವಿಪತ್ತುಗಳು’ ಎಂಬ ವಿಷಯದ ಮೇಲೆ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಅ.4ರಂದು ಬೆಳಿಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮೈಸೂರು ಪತ್ರಕರ್ತರ ಭವನದಲ್ಲಿಂದು ಮಾಹಿತಿ ನೀಡಿದ ಪ್ರಾಚಾರ್ಯರಾದ ಡಾ.ಮರಿಗೌಡ ಅವರು ವಿಶ್ವದ ಹೆಚ್ಚು ವಿಪತ್ತು ಪೀಡಿತ ದೇಶಗಳಲ್ಲಿ ಭಾರತವು ಒಂದಾಗುವ ಲಕ್ಷಣಗಳು ಗೋಚರಿಸುತ್ತಿದೆ. ಅದಕ್ಕೆ ರಾಷ್ಟ್ರದ ಉನ್ನತ ಮಟ್ಟದ ಸಾಮಾಜಿಕ ಮತ್ತು ಆರ್ಥಿಕ ನೀತಿಗಳ ಜೊತೆಗೆ ಭೌಗೋಳಿಕ ಪರಿಸ್ಥಿತಿಗಳು ಕಾರಣವಾಗಿವೆ. ತೀವ್ರವಾದ ಮಾನಸ ಸಂಪನ್ಮೂಲ, ವಸ್ತುಗಳ ಮತ್ತು ಪರಿಸರ ನಷ್ಟದಿಂದಾಗಿ ಸುಸ್ಥಿರ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ಉತ್ತಮ ಪರಿಸರ ಮಾನವನ ಕೈ ಮೀರಿ ಹೋಗುತ್ತಿರುವುದಂತೂ ಸತ್ಯ. ಆಕ್ರಮಣಕಾರಿ ಅಭಿವೃದ್ಧಿಶೀಲ ಪರಿಕಲ್ಪನೆಗಳಿಗೆ ಸಂಬಂಧಿಸಿದ ಆರ್ಥಿಕ ನೀತಿಗಳು ದೇಶದ ಪ್ರಾಕೃತಿಕ ವಿಪತ್ತುಗಳಿಗೆ ಕಾರಣವಾಗಿದ್ದು, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದ ಆರ್ಥಿಕತೆಯ ಮೇಲೆ ನೈಸರ್ಗಿಕ ವಿಪತ್ತು ಬಲವಾದ ಪೆಟ್ಟು ನೀಡುತ್ತಿದೆ ಎಂದರು.
ಕಾಲೇಜಿನ ಪಿ.ಎಂ ಚಿಕ್ಕಬೋರಯ್ಯ ಹಾಲ್ ನಲ್ಲಿ ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಡಾ.ಮಹೇಶ್ ಬಿಲ್ವಾ, ಡಾ.ಜಿ.ಎಸ್.ಪ್ರೇಮ್ ಕುಮಾರ್, ಡಾ.ಹೇಮಚಂದ್ರ ಪಿ.ಎನ್, ಗಿರೀಶ್ , ಡಾ.ಎಸ್.ಅರುಣ್ ದಾಸ್, ಡಾ.ನವಿತಾ ತಿಮ್ಮಯ್ಯ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾನ್ಫರೆನ್ಸ್ ಸೆಕ್ರೆಟರಿ ಡಾ.ಬಿ.ಎಸ್.ಶ್ರೀಹರ್ಷ , ಕಾನ್ಫರೆನ್ಸ್ ಕನ್ವೀನರ್ ಪ್ರೊ.ಮೋಹನ್ ಕುಮಾರ್ , ಪ್ರೊ.ಆರ್.ಸಿದ್ದರಾಜು, ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)