ಪ್ರಮುಖ ಸುದ್ದಿ

ಬಿಬಿಎಂಪಿಯ ನೂತನ ಮೇಯರ್ ಆಗಿ ಚುನಾಯಿತರಾದ ಗೌತಮ್ ಕುಮಾರ್ ಜೈನ್

ರಾಜ್ಯ(ಬೆಂಗಳೂರು)ಅ.1:-   ಬಿಬಿಎಂಪಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದಿದ್ದೂ ಕಳೆದ 4 ವರ್ಷದಿಂದ ಅಧಿಕಾರ ಸಿಗದೇ ಹತಾಶೆಗೊಂಡಿದ್ದ ಬಿಜೆಪಿ ಕೊನೆಗೂ ಐದನೇ ವರ್ಷ ಮೇಯರ್ ಪಟ್ಟ ಪಡೆದುಕೊಳ್ಳುವಲ್ಲಿ ಸಫಲವಾಗಿದೆ.

ಜೋಗುಪಾಳ್ಯ ವಾರ್ಡ್​ನ ಬಿಜೆಪಿ ಕಾರ್ಪೊರೇಟರ್ ಗೌತಮ್ ಕುಮಾರ್ ಜೈನ್ ಅವರು ಬಿಬಿಎಂಪಿಯ ನೂತನ ಮೇಯರ್ ಆಗಿ ಚುನಾಯಿತರಾಗಿದ್ದಾರೆ. ಇಂದು ಬಿಬಿಎಂಪಿ ಮಂಡಳಿಯಲ್ಲಿ ನಡೆದ ಮತದಾನದಲ್ಲಿ ಗೌತಮ್ ಜೈನ್ ಅವರು ಮೈತ್ರಿ ಅಭ್ಯರ್ಥಿ ಆರ್.ಎಸ್. ಸತ್ಯನಾರಾಯಣ ಅವರನ್ನು ಸೋಲಿಸಿದ್ದಾರೆ. ಜೊತೆಗೆ ಬಿಜೆಪಿಯ ರಾಮಮೋಹನ್ ರಾಜು ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ಧಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: