ಮೈಸೂರು

ಆತ್ಮದ ಕುರಿತಾದ ಚಿಂತನೆ ನಡೆಸುವವರು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ : ಚಕ್ರವರ್ತಿ ಸೂಲಿಬೆಲೆ

ಯಾರು ಆತ್ಮದ ಕುರಿತಾದ ಚಿಂತನೆಯನ್ನು ನಡೆಸುತ್ತಾರೋ ಅವರು ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದು ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾದ ಯುವ ಶಿಬಿರದಲ್ಲಿ ಪಾಲ್ಗೊಂಡ ಚಕ್ರವರ್ತಿ ಸೂಲಿಬೆಲೆ ನಾರಿ ಧನ್ಯತೆಗೆ ದಾರಿ ವಿಷಯದ ಕುರಿತು ಮಾತನಾಡಿದರು.
ಹೆಣ್ಣನ್ನು ಭೋಗದ ವಸ್ತುವಾಗಿ ನೋಡೋದು ಪ್ರಾಣಿಗಳ ರೀತಿಯ ಗುಣ. ಪ್ರಾಣಿಗಳು ಭೋಗವಸ್ತುವಾಗಿ ಹೆಣ್ಣು ಪ್ರಾಣಿಯನ್ನು ನೋಡುತ್ತೆ. ಇಂದಿನ ದಿನಗಳಲ್ಲಿಯೂ ಕೆಲವರು ಹೆಣ್ಣನ್ನು ಭೋಗದ ವಸ್ತುವಾಗಿ ನೋಡುತ್ತಿದ್ದಾರೆ.
ಯಾರು ಆತ್ಮದ ಚಿಂತೆ ಮಾಡುತ್ತಾರೋ ಅವರು ಮಾನವೀಯತೆಯ ಗುಣ ಬೆಳೆಸಿಕೊಳ್ಳುತ್ತಾರೆ. ಹೆಣ್ಣು ಸಿಂಹಕ್ಕೆ ಮುಖದ ಮೇಲೆ ಮಚ್ಚೆ ಇರುವ ಗಂಡು ಸಿಂಹ ಇಷ್ಟವಂತೆ ಎಂಬ ರಿಪೋರ್ಟ್ ನೋಡಿದೆ. ಇದು ಆಶ್ಚರ್ಯ ತರಿಸಿತು.ಪ್ರಾಣಿಗಳಿಗೆ ಈ ಗುಣ ಇರಲಿದೆ. ಹೆಣ್ಣನ್ನು ಆತ್ಮವಸ್ತುವಾಗಿ ನೋಡಬೇಕೆ ವಿನಹ, ಭೋಗವಸ್ತುವಾಗಿ ಅಲ್ಲ ಎಂದರು.
ಭಾರತೀಯ ನಾರಿ ಎಂದರೆ ಭಾರತೀಯ ಹೆಮ್ಮೆಯ ಪುತ್ರನನ್ನು ತೊಟ್ಟಿಲಲೇ ಸಿದ್ದಗೊಳಿಸುವ ಮಾತೆ. ಝಾನ್ಸಿ ರಾಣಿ ಅಂದೇ ತನ್ನ ದತ್ತುಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಟ ಮಾಡಿದ ದಿಟ್ಟ ಮಹಿಳೆ. ಅವಶ್ಯಕತೆ ಬಿದ್ದರೆ ಸಾವಿನ ನೆರಳಲ್ಲೇ ಹೋರಾಟ ಮಾಡುವ ಗುಣವನ್ನು ಹೆಣ್ಣು ಮಕ್ಕಳು ಬೆಳೆಸಿಕೊಳ್ಳಲು ಸಿದ್ದರಿರಬೇಕು. ಸ್ವಾಮಿ ವಿವೇಕಾನಂದರು ಗಂಡು ಮಕ್ಕಳಿಗೆ ಮಾತ್ರ ಎಲ್ಲವನ್ನೂ ಹೇಳಿಲ್ಲ. ಹೆಣ್ಣು ಮಕ್ಕಳು ವಿವೇಕಾನಂದರ ಮಾತುಗಳನ್ನು ಕೇಳಿಸಿಕೊಂಡಿಲ್ಲ. ಯಾಕಂದರೆ ಸ್ವಾಮಿ ವಿವೇಕಾನಂದರ ಪರಮಶಿಷ್ಯೆಯಾಗಿದ್ದ ನೀವೆದಿತಳನ್ನು ಹೆಣ್ಣು ಮಕ್ಕಳು ಆದರ್ಶವಾಗಿಟ್ಟುಕೊಳ್ಳಬೇಕು.  ಆಕೆ ಓರ್ವ ಬ್ರಿಟಿಷ್ ಪ್ರಜೆ. ಆದರೆ ಭಾರತಕ್ಕೆ ಕೊಟ್ಟ ಕೊಡುಗೆ ಮಾತ್ರ ಅಪಾರ. ಭಾರತದ ಹಿರೋಹಿನ್‌ ಅಂದರೆ ಅದು ಸೀತಾ ಮಾತೆ,  ಶಾರದಮಾತೆ ಎಂದು  ಆಕೆ ಮಕ್ಕಳಿಗೆ ಪಾಠ ಮಾಡುತ್ತಿದ್ದರು ಎಂದು ತಿಳಿಸಿದರು. ಹೆಣ್ಣು ಮಕ್ಕಳು ತಮ್ಮಲ್ಲಿರುವ  ಬಲಾಢ್ಯ ಶಕ್ತಿಯನ್ನು ಹೊರಚೆಲ್ಲಬೇಕಿದೆ.
ಸಂಪತ್ ಪಾಲ್ ದೇವಿ, ಕುಡುಕರ ಚಟ ಬಿಡಿಸಲು ಗುಲಾಬಿ ಗ್ಯಾಂಗ್ ಕಟ್ಟಿದ್ದರು. ಅಂದು ಲಾಠಿ ಹಿಡಿದು ನಿಂತಿದ್ದರು. ಕಿರುಕುಳ ಕೊಟ್ಟ ತನ್ನ ಗಂಡನಿಂದ ಹಿಡಿದು ರಸ್ತೆಯಲ್ಲಿ ಕುಡಿದು ತೊಂದರೆ ನೀಡುತ್ತಿದ್ದ ಯಾರಿಗೂ ಬಿಟ್ಟಿಲ್ಲ. ಸಾಮಾನ್ಯ ಜನರ ಸಮಸ್ಯೆಗೂ ಸ್ಪಂದಿಸುತ್ತಿದ್ದಳು ಎಂದು ಉದಾಹರಿಸಿದರು.
ಹೆಣ್ಣುಮಕ್ಕಳನ್ನು ಕೆಟ್ಟ ಕಣ್ಣುಗಳಿಂದ ನೋಡಿದರೆ. ಹೆಣ್ಣುಮಕ್ಕಳು ಅವರ ಕಣ್ಣುಗಳನ್ನು ತಮ್ಮ‌ಕಣ್ಣಿನಲ್ಲೇ ಕಿತ್ತು ಹಾಕುವ ಮನಸ್ಥಿತಿ ಬೆಳಿಸಿಕೊಳ್ಳಬೇಕು. ಭಾರತೀಯ ಹೆಣ್ಣುಮಕ್ಕಳು ಶ್ರೇಷ್ಠ ಗುರಿ ಹೊಂದಬೇಕು ಎಂದು ನೆರೆದಿದ್ದ ಹೆಣ್ಣುಮಕ್ಕಳಿಗೆ ಸ್ಪೂರ್ತಿಯ ಮಾತುಗಳನ್ನು ಹೇಳಿದರು. ಜ್ಞಾನದ ಕಡೆ ಗಮನ ಇರಬೇಕೆ ಹೊರತು, ಭೋಗದ ಕಡೆ ಗಮನ ಇರಬಾರದು ಎಂದು ಕಿವಿ ಮಾತನ್ನು ಹೇಳಿದರು. ಮಾತ್ರವಲ್ಲ ಇದೇವೇಳೆ ಅರುಣಿಮಾ ಸಿನ್ಹಾ, ಸಂಪತ್ ಪಾಲ್ ದೇವಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಇಂತವರ ಆದರ್ಶ ಇಟ್ಟುಕೊಳ್ಳುವಂತೆ ತಿಳಿ‌ಸಿದರು.

ಕಾರ್ಯಕ್ರಮದಲ್ಲಿ ತಿರುಪತಿ ರಾಮಕೃಷ್ಣ ಮಿಶನ್ ಆಶ್ರಮದ ಕಾರ್ಯದರ್ಶಿ ಅನುಪಮಾನಂದಜೀ ಮಹಾರಾಜ್, ಅಧ್ಯಕ್ಷ ಆತ್ಮಜ್ಞಾನಂದಜೀ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: