ಮೈಸೂರು

ನೂತನ ದೇವಾಲಯಗಳ ಪ್ರತಿಷ್ಠಾಪನಾ ಕಾರ್ಯಕ್ರಮ : ಮಾರ್ಚ್ 1 ರಂದು

ಟಿ.ನರಸೀಪುರ ತಾಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ‍ಶ್ರೀ ಗುರುದತ್ತಾತ್ರೇಯಸ್ವಾಮಿ, ಶ್ರೀ ವಿನಾಯಕ ಹಾಗೂ ಲಕ್ಷ್ಮಿದೇವಿ ನವಗ್ರಹ  ದೇವಸ್ಥಾನ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಮಾರ್ಚ್ 1 ರಂದು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂ‍ಘದ ನಿರ್ದೇಶಕ ಡಾ.ಕೆ.ಮಹದೇವ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ  ಕುಮಾರ ಚಂದ್ರಶೇಖರನಾಥಸ್ವಾಮೀಜಿ ಜ್ಯೋತಿ ಬೆಳಗಿಸಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಉದ್ಘಾಟನೆ ಮಾಡಲಿದ್ದಾರೆ. ಮುಖ‍್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಮಾದೇಗೌಡ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ವಾಸು, ವೆಂಕಟೇಶ್, ಮೇಯರ್ ಎಂ.ಜೆ.ರವಿಕುಮಾರ್, ಸಂದೇಶ್ ನಾಗರಾಜ್ ಆಗಮಿಸಲಿದ್ದಾರೆ.

ಮುಖ್ಯ ಭಾಷಣಕಾರರಾಗಿ ರಾಜೀವ್ ಗಾಂಧಿ ವಿವಿಯ ಮಾಜಿ ಉಪಕುಲಪತಿ ಡಾ.ಕಾಂತಜಾದವ್, ಗುಲ್ಬರ್ಗಾ ವಿವಿಯ  ಉಪಕುಲಪತಿ ಡಾ.ಎಸ್.ಆರ್.ನಿರಂಜನ್, ಮಂಗಳೂರು ವಿವಿಯ  ಉಪಕುಲಪತಿ ಪ್ರೊ.ಕೆ.ಭೈರಪ್ಪ, ಕುವೆಂಪು ವಿವಿಯ ಮಾಜಿ ಉಪಕುಲಪತಿ ಡಾ.ಕೆ.ಚಿದಾನಂದಗೌಡ, ಜಾನಪದ ವಿವಿ, ರೆವೋ ವಿವಿ, ಬೆಂಗಳೂರು ವಿವಿ ಹಾಗೂ ಮೈಸೂರು ವಿವಿ ಮಾಜಿ ಉಪಕುಲಪತಿಗಳು ಉಪಸ‍್ಥಿತರಿರುತ್ತಾರೆ ಎಂದು ಹೇಳಿದರು.

ಅಲ್ಲದೇ ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ರಾಷ್ಟ್ರೀಯ ಸರ್ವೋಚ್ಛ ನಾಯಕ ಎಂಬ ಬಿರುದು ನೀಡಿ ಗೌರವಿಸಲಾಗುತ್ತದೆ ಎಂದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

comments

Related Articles

error: