ಪ್ರಮುಖ ಸುದ್ದಿಮೈಸೂರು

ಸೇಫ್’ವೀಲ್ಸ್’ನಿಂದ ಬಂಡೀಪುರಕ್ಕೆ ಮಾನವೀಯ ನೆರವು; ನೀವೂ ನೀಡಬಹುದು

ಕಾಡಿನ ಕತ್ತಲಲ್ಲಿ ದಾರಿ ತೋರುವ ಟಾರ್ಚ್.

ಮೈಸೂರು : ಅಗ್ನಿ ಅನಾಹುತ ಸಂಭವಿಸಿ ಸಂಕಷ್ಟಕ್ಕೆ ಸಿಲುಕಿರುವ ಬಂಡೀಪುರ ಅರಣ್ಯ ಪ್ರದೇಶದ ಸಂತ್ರಸ್ತರಿಗೆ ಸೇಫ್’ವೀಲ್ಸ್ ಸಂಸ್ಥೆಯು ಮಾನವೀಯ ನೆರವು ರವಾನಿಸುತ್ತಿದೆ.

ಇಂದು ಮಧ್ಯಾಹ್ನ 3 ಗಂಟೆಗೆ ಮೈಸೂರಿನ ಸರಸ್ವತಿಪುರಂನಲ್ಲಿರುವ ಸೇಫ್‍’ವೀಲ್ಸ್ ಕಚೇರಿಯಿಂದ ನೆರವು ಹೊತ್ತ ವಾಹನ ಬಂಡೀಪುರದತ್ತ ಹೊರಡಲಿದ್ದು, ನೆರವು ನೀಡಲಿಚ್ಛಿಸುವ ನಾಗರಿಕರು ಸಂಸ್ಥೆಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 0821-2541100.

ತುರ್ತು ಅಗತ್ಯಗಳಾದ ನೀರು, ಬ್ರೆಡ್-ಜಾಮ್, ಹಣ್ಣುಗಳ ಜೊತೆಗೆ ಕಾಡಿನ ಕತ್ತಲಲ್ಲಿ ದಾರಿ ನೋಡಲು ಬೆಳಕು ತೋರುವ ಉತ್ತಮ ಗುಣಮಟ್ಟದ ಟಾರ್ಚ್‍’ಗಳನ್ನು ಸಂಸ್ಥೆ ರವಾನಿಸುತ್ತಿದೆ. ನೆರವು ನೀಡಲಿಚ್ಛಿಸುವ ನಾಗರಿಕರು ಉಪಯೋಗಕ್ಕೆ ಬರುವ ಯಾವುದೇ ನೆರವು ನೀಡಬಹುದು ಎಂದು ಸಂಸ್ಥೆ ತಿಳಿಸಿದೆ.

ನಗದು ಸ್ವೀಕರಣೆ ಇಲ್ಲ :

“ಕತ್ತಲಲ್ಲಿ ಬೆಳಕು ನೀಡಬಲ್ಲ ಉತ್ತಮ ಟಾರ್ಚ್’ಗಳ ತುರ್ತು ಅಗತ್ಯವಿದೆ. ನೆರವಿಗೆ ಬರುವ ವಸ್ತುಗಳನ್ನು ಮಾತ್ರ ಸ್ವೀಕರಿಸುತ್ತಿದ್ದು, ನಗದು ರೂಪದ ಹಣ ಸ್ವೀಕರಿಸುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಅರಣ್ಯ ಅಧಿಕಾರಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇವೆ. ಬಂಡೀಪುರ ಚೆಕ್‍ಪೋಸ್ಟ್ ಬಳಿ ಮಾನವೀಯ ನೆರವು ತಂದು ಕೊಡಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಸ್ಥೆಯೇ ನೇರವಾಗಿ ಮುತುವರ್ಜಿ ವಹಿಸಿ ವಸ್ತುಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸುವುದರಿಂದ ಯಾವುದೇ ದುರುಪಯೋಗ ನಡೆಯುವ ಕುರಿತು ಅನುಮಾನ ಬೇಡ ಎಂದು ಸೇಫ್’ವೀಲ್ ಸಂಸ್ಥೆ ಹೇಳಿದೆ.

Leave a Reply

comments

Related Articles

error: