ಪ್ರಮುಖ ಸುದ್ದಿಮೈಸೂರು

ಮೈಸೂರಿನ ಏರ್ ಶೋ ನಲ್ಲಿ ಭಾಗವಹಿಸಬೇಕಿದ್ದ ಹೆಲಿಕಾಪ್ಟರ್ ಶ್ರೀರಂಗಪಟ್ಟಣ ಅರಕೆರೆ ಬೋರೆ ಬಳಿ ತುರ್ತು ಭೂ ಸ್ಪರ್ಶ

ಮೈಸೂರು,ಅ.2:- ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಏರ್ ಶೋನಲ್ಲಿ ಭಾಗವಹಿಸಬೇಕಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿರುವ ಘಟನೆ ನಡೆದಿದೆ.

ಮೈಸೂರು ದಸರಾ ಅಂಗವಾಗಿ  ನಗರದ ಬನ್ನಿಮಂಟಪದಲ್ಲಿ ಏರ್ ಶೋ ನಡೆಯಬೇಕಿತ್ತು. ಈ ನಡುವೆ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಶ್ರೀರಂಗಪಟ್ಟಣದ ಸಮೀಪ ಅರಕೆರೆ ಬೋರೆ ಬಳಿ  ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದೆ. ತಾಂತ್ರಿಕ ದೋಷ ಹಿನ್ನೆಲೆ ಸೇನಾ ಹೆಲಿಕಾಪ್ಟರ್ ತುರ್ತು ಲ್ಯಾಂಡ್ ಆಗಿದೆ.

ತುರ್ತು ಭೂಸ್ಪರ್ಶದ ಬಳಿಕ  ಏರ್ ಫೋರ್ಸ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಯಲಹಂಕ ವಾಯುನೆಲೆಯಿಂದ ಮೈಸೂರಿನತ್ತ ಹೆಲಿಕಾಪ್ಟರ್ ಹೊರಟಿತ್ತು. ಘಟನೆ ವೇಳೆ ಅದೃಷ್ಟವಶಾತ್ ಹೆಲಿಕಾಪ್ಟರ್ ನಲ್ಲಿದ್ದ ಸೇನಾ ಸಿಬ್ಬಂದಿ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದು ಸ್ಥಳಕ್ಕೆ ಅರಕೆರೆ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: