ಮೈಸೂರು

ಫೆ.27 : ಮೈಸೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರಾಗಿ ಕೆ.ಎ.ವಿಲಿಯಂ ಪೀಠಾರೋಹಣ

ಮೈಸೂರು  ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ  ಅತಿವಂದನೀಯ ಕೆ.ಎ.ವಿಲಿಯಂರವರು  ಫೆ.27ರಂದು ದೀಕ್ಷೆ ಮತ್ತು ಪೀಠಾರೋಹಣ ಗೈಯ್ಯಲಿದ್ದಾರೆ ಎಂದು ನಿವೃತ್ತ ಧರ್ಮಾಧ್ಯಕ್ಷ ಡಾ.ಥಾಮಸ್ ಆಂಟನಿ ವಾಜಪಿಳ್ಳೈ ತಿಳಿಸಿದರು.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.27ರಂದು ಸಂಜೆ 4.30ಕ್ಕೆ ಸಂತ ಜೋಸೆಫರ ಪ್ರಧಾನ ದೇವಾಲಯದಲ್ಲಿ ಸಮಾರಂಭ ನಡೆಯಲಿದ್ದು, ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಡಾ.ಬರ್ನಾಡ್ ಮೊರಾಸ್, ಚಿಕ್ಕಮಗಳೂರಿನ ಡಾ.ಅಂತೋಣಿ ಸ್ವಾಮಿ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ ಎಂದರು.

ಮೈಸೂರು ಧರ್ಮಾಧ್ಯಕ್ಷರು ಕೆಥೊಲಿಕ್ ಸಭೆಗೆ ಧಾರ್ಮಿಕ ಗುರುವಾಗಿ ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಮಾರಂಭಕ್ಕೆ ಸರಿಸುಮಾರು 25 ಧರ್ಮಾಧ್ಯಕ್ಷರು, ವಿವಿಧೆಡೆಗಳಿಂದ ಸುಮಾರು 500 ಧಾರ್ಮಿಕ ಗುರುಗಳು, 10,000 ಧಾರ್ಮಿಕ ಸಹೋದರ-ಸಹೋದರಿಯರು ಹಾಗೂ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸಚಿವರುಗಳಾದ ಡಾ.ಹೆಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಮೇಯರ್ ಎಂ.ಜೆ.ರವಿಕುಮಾರ್, ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

Leave a Reply

comments

Related Articles

error: