ಮನರಂಜನೆ

ಬಾಲಿವುಡ್‌ನ ಅತಿದೊಡ್ಡ ಆರಂಭಿಕ ಚಿತ್ರದ ದಾಖಲೆ ನಿರ್ಮಿಸಿದ ಬಾಲಿವುಡ್‌ ಆಕ್ಷನ್ ಸೂಪರ್‌ ಸ್ಟಾರ್‌ ಹೃತಿಕ್ ರೋಷನ್-ಟೈಗರ್ ಶ್ರಾಫ್ ಚಿತ್ರ ‘ವಾರ್’

ದೇಶ(ನವದೆಹಲಿ)ಅ.3:-   ಬಾಲಿವುಡ್‌ನ ಆಕ್ಷನ್ ಸೂಪರ್‌ ಸ್ಟಾರ್‌ಗಳಾದ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅವರ ‘ವಾರ್’ ಚಿತ್ರ ಮೊದಲ ದಿನ ಐತಿಹಾಸಿಕ ಗಳಿಕೆ ಮಾಡಿದೆ.

ಈ ಚಿತ್ರವು ಬಾಲಿವುಡ್‌ನ ಅತಿದೊಡ್ಡ ಆರಂಭಿಕ ಚಿತ್ರದ ದಾಖಲೆ ನಿರ್ಮಿಸಿದ್ದು, 53 ಕೋಟಿ ಗಳಿಸಿದೆ. ಈ ಚಿತ್ರವು ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಅವರಂತಹ ದೊಡ್ಡ ಸೂಪರ್ ಸ್ಟಾರ್ಸ್ ಗಳು ಸೇರಿದಂತೆ ಎಲ್ಲಾ ಬಾಲಿವುಡ್ ದಾಖಲೆಗಳನ್ನು ಮುರಿದಿದೆ.

ಚಿತ್ರವು ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅವರ ವೃತ್ತಿಜೀವನದ ಅತಿದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ಇದಕ್ಕೂ ಮೊದಲು ಹೃತಿಕ್ ರೋಷನ್ ಅವರ ಚಿತ್ರ ಬ್ಯಾಂಗ್‌ಬ್ಯಾಂಗ್ ಮೊದಲ ದಿನದಲ್ಲಿ ಅತಿ ಹೆಚ್ಚು ಗಳಿಕೆಯ ದಾಖಲೆಯನ್ನು ಹೊಂದಿತ್ತು.  ಮೊದಲ ದಿನದಲ್ಲಿ ಸುಮಾರು 24.40 ಕೋಟಿ ರೂ. ಗಳಿಸಿತ್ತು. ಈಗ ‘ವಾರ್ ‘ಆ ಚಿತ್ರಕ್ಕಿಂತ ಎರಡು ಪಟ್ಟು ಹೆಚ್ಚು ಗಳಿಸಿದೆ.

ವಾರ್  (2019) – 51.50 ಕೋಟಿ ರೂ., ಬ್ಯಾಂಗ್ ಬ್ಯಾಂಗ್ (2014) – 24.40 ಕೋಟಿ ರೂ.,ಅಗ್ನಿಪಥ್ (2012) – 21.72 ಕೋಟಿ ರೂ., ಕ್ರಿಶ್ 3 (2013) – 18.93 ಕೋಟಿ ರೂ., ಸೂಪರ್ 30 (2019) – 11.77 ಕೋಟಿ ರೂ. ಗಳಿಸಿತ್ತು.

ಟೈಗರ್ ಶ್ರಾಫ್ ಅವರ ಚಿತ್ರದ ಗಳಿಕೆ ನೋಡಿದರೆ  ‘ಬಾಘಿ 2’ ಮೊದಲು ಅವರು ಅತಿ ಹೆಚ್ಚು ಗಳಿಸಿದ ಚಿತ್ರವಾಗಿತ್ತು.   ಟೈಗರ್ ಶ್ರಾಫ್ ಅವರ ಹಿಂದಿನ ಚಲನಚಿತ್ರ ಗಳಿಕೆಯ ಅಂಕಿಅಂಶಗಳು ಇಲ್ಲಿವೆ. ವಾರ್ (2019) – 51.50 ಕೋಟಿ ರೂ., ಬಾಘಿ 2 (2018) – 25 ಕೋಟಿ ರೂ., ಬಾಘಿ (2016) – 11.93 ಕೋಟಿರೂ.,  ಸ್ಟೂಡೆಂಟ್ ಆಫ್ ದಿ ಇಯರ್  (2019) – 11.21 ಕೋಟಿರೂ., ಮುನ್ನಾ ಮೈಕೆಲ್ (2017) – 6.62 ಕೋಟಿ ರೂ.,ಗಳಿಸಿತ್ತು.

ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಚಿತ್ರಕ್ಕೆ ಚಿತ್ರ ವಿಮರ್ಶಕರು ಉತ್ತಮ ರೇಟಿಂಗ್ ನೀಡಿದ್ದಾರೆ.

ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದು,. ಇದರಲ್ಲಿ ಹೃತಿಕ್ ಮತ್ತು ಟೈಗರ್ ಅವರೊಂದಿಗೆ ವಾಣಿ ಕಪೂರ್ ನಟಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: