ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ 174 ಜನರಲ್ಲಿ ಪತ್ತೆಯಾದ ಎಚ್‍1ಎನ್‍1 ಜ್ವರ ; ಜನತೆ ಕೊಡಬೇಕು ಶುಚಿತ್ವಕ್ಕೆ ಆದ್ಯತೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ಎಚ್‍1ಎನ್‍1 ಜ್ವರದ ಸೀಸನ್. ಪ್ರತಿ ವರ್ಷ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಉದ್ಯಾನ ನಗರ ಬೆಂಗಳೂರಿನಲ್ಲಿ ಜನರಿಗೆ ಜ್ವರಗಳ ಹಾವಳಿ ಆರಂಭವಾಗುತ್ತದೆ.

ಪ್ರತಿವರ್ಷದಂತೆ ಎಚ್1ಎನ್1 ರೋಗ ಹಲವು ಜನರಲ್ಲಿ ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರೋಗ ಉಲ್ಬಣಿಸಿದ್ದು, 198 ವಾರ್ಡ್`ಗಳ ಪೈಕಿ 174 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈಗಾಗಲೇ ಮೂವರು ಈ ಜ್ವರದಿಂದ ಮೃತಪಟ್ಟಿರುವುದರ ಬಗ್ಗೆ ವರದಿಯಾಗಿದೆ. 20 ರಿಂದ 30 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಈ ಜ್ವರದ ವೈರಾಣುಗಳು ಬೆಳೆಯುತ್ತವೆ. ಬೆಂಗಳೂರಿನ ಚಳಿಯ ವಾತಾವರಣವೂ ಈ ರೋಗಾಣುಗಳಿಗೆ ಪೂರಕವಾಗಿದ್ದು, ರೋಗ ಹೆಚ್ಚಲು ಕಾರಣ ಎನ್ನಲಾಗಿದೆ.

ಶುಚಿತ್ವ ಮುಖ್ಯ: ಮನೆಯ ಸುತ್ತಲಿನ ಪರಿಸರವನ್ನ ಶುಚಿಯಾಗಿಟ್ಟುಕೊಳ್ಳುವುದರಿಂದ ರೋಗಾಣುಗಳು ಉಲ್ಬಣಿಸದಂತೆ ತಡೆಯಬಹುದಾಗಿದೆ. ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ರಸ್ತೆ ಬದಿಯಲ್ಲಿ ಮಾರುವ ಆಹಾರ ತಿನ್ನುವ ಮುನ್ನ ಯೋಚಿಸಿ ಸೇವಿಸಬೇಕು. ಶಿತ, ಕೆಮ್ಮು, ಜ್ವರ, ಅಸ್ತಮಾ, ಕಣ್ಣುಕೆಂಪಾಗುವುದು ಮತ್ತು ಗಂಟಲು ನೋವಿನಂತಹ ಲಕ್ಷಣಗಳು ಹಂದಿಜ್ವರದ ಮುನ್ಸೂಚನೆಯಾಗಿದೆ. ಈ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ದೊರೆಯುವ ಕಡೆ ಚಿಕಿತ್ಸೆ ಪಡೆದರೆ ಜ್ವರವನ್ನು ಗುಣಪಡಿಸಬಹುದು.

Leave a Reply

comments

Related Articles

error: