ಮೈಸೂರು

ಚಿತ್ರಸಂತೆ-ಹಸಿರುಸಂತೆ ಸಂಬಂಧ ಕೆ.ಆರ್.ಬಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ಸಂಚರಿಸಲು ನಗರ ಪೊಲೀಸ್ ಆಯುಕ್ತರ ಸೂಚನೆ

ಮೈಸೂರು,ಅ.4:- ದಸರಾ-2019 ರ ಮಹೋತ್ಸವದ ಅಂಗವಾಗಿ ಕೆ.ಆರ್.ಬಿ ರಸ್ತೆಯಲ್ಲಿ ನಾಳೆ ನಡೆಯಲಿರುವ  ಚಿತ್ರಸಂತೆ-ಹಸಿರುಸಂತೆ ಸಂಬಂಧ ಕೆ.ಆರ್.ಬಿ ರಸ್ತೆಯಲ್ಲಿ ವಾಹನ ಸಂಚಾರವನ್ನು  ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ಸಂಚರಿಸಲು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ ವತಿಯಿಂದ ಮೈಸೂರು ದಸರಾ-2019ರ ಮಹೋತ್ಸವದ ಅಂಗವಾಗಿ   05-10-2019 ರಂದು ಬೆಳಿಗ್ಗೆ 9  ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೆ.ಆರ್.ಬಿ ರಸ್ತೆಯಲ್ಲಿ ಚಿತ್ರಸಂತೆ – ಹಸಿರು ಸಂತೆಯನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಲಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮವು ಸುಗಮವಾಗಿ ನಡೆಯಲು ಹಾಗೂ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಕಾರ್ಯಕ್ರಮ ನಡೆಯುವ ರಸ್ತೆಯಲ್ಲಿ   ವಾಹನ ಸಂಚಾರದ ಮೇಲೆ ನಿರ್ಬಂಧ ವಿಧಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಕೆ.ಆರ್.ಬುಲೇವಾರ್ಡ್ ರಸ್ತೆಯಲ್ಲಿ ಕೌಟಿಲ್ಯ ವೃತ್ತದಿಂದ ದಕ್ಷಿಣಕ್ಕೆ ಏಕಲವ್ಯ ವೃತ್ತದವರೆಗೆ ಜೋಡಿ ರಸ್ತೆಯ ಎರಡು ಪಾರ್ಶ್ವದ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

 ವಾಹನ ಸಂಚಾರದ ಬದಲಿ ಮಾರ್ಗ

ಕೌಟಿಲ್ಯ ವೃತ್ತದಿಂದ ಕೆ.ಆರ್.ಬಿ ರಸ್ತೆ ಮೂಲಕ ಏಕಲವ್ಯ ವೃತ್ತದ ಕಡೆಗೆ ಸಾಗುತ್ತಿದ್ದ ಎಲ್ಲಾ ಮಾದರಿಯ ವಾಹನಗಳು ಕೌಟಿಲ್ಯ ವೃತ್ತದಿಂದ ಮೂಡಾ ವೃತ್ತ – ಜೆ.ಎಲ್.ಬಿ ರಸ್ತೆ ಮೂಲಕ ಮುಂದೆ ಸಾಗಬೇಕು.

ಏಕಲವ್ಯ ವೃತ್ತದಿಂದ ಕೆ.ಆರ್.ಬಿ ರಸ್ತೆ ಮೂಲಕ ಕೌಟಿಲ್ಯ ವೃತ್ತದ ಕಡೆಗೆ ಸಾಗುತ್ತಿದ್ದ ಎಲ್ಲಾ ಮಾದರಿಯ ವಾಹನಗಳು ಏಕಲವ್ಯ ವೃತ್ತದಿಂದ ಚಾಮರಾಜ ಜೋಡಿ ರಸ್ತೆ – ರಾಮಸ್ವಾಮಿ ವೃತ್ತ ತಲುಪಿ ಮುಂದೆ ಸಾಗಬೇಕು ಎಂದು ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: