ಪ್ರಮುಖ ಸುದ್ದಿಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ 39ಸ್ತಬ್ಧ ಚಿತ್ರಗಳು

ಮೈಸೂರು,ಅ.4:- ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಅ.8ರ ವಿಜಯ ದಶಮಿಯಂದು ಈ ಬಾರಿ 39ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ ಎಂದು ಅಧ್ಯಕ್ಷ ಮುರಳಿ ತಿಳಿಸಿದರು.

ಮೈಸೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ವಿಶೇಷವಾಗಿ ರಾಜ್ಯದ ಐತಿಹಾಸಿಕ ಹಿನ್ನೆಲೆ, ಕಲೆ, ವಾಸ್ತು ಶಿಲ್ಪ ಮತ್ತು ಸಂಸ್ಕೃತಿ ಬಿಂಬಿಸುವಂಥಹದ್ದು, ಪರಿಸರ, ಅರಣ್ಯೀಕರಣ, ಅಂತರ್ಜಲ್, ಪರಿಸರ ಸ್ನೇಹಿ ಸ್ತಬ್ಧ ಚಿತ್ರಗಳು, ಪ್ರವಾಸೋದ್ಯಮ ಹಾಗೂ ಇತ್ತೀಚಿನ ನೆರೆ ಹಾಗೂ ಬರ ಮತ್ತು ಚಂದ್ರಯಾನ-2, ಮೈಸೂರು ವಿಶ್ವವಿದ್ಯಾನಿಲಯ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಸಾಧನೆ ಕುರಿತ ಸ್ತಬ್ಧ ಚಿತ್ರಗಳು, ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕುರಿತು ಬಿಂಬಿಸುತ್ತಿರುವ ಸ್ತಬ್ಧ ಚಿತ್ರಗಳು ರಾಜ್ಯದ ಜಿಲ್ಲೆಗಳ ಇಲಾಖೆಗಳಿಂದ ಸಿದ್ಧಪಡಿಸಲಾಗುತ್ತಿದೆ ಎಂದರು.

ಈಗಾಗಲೇ ಸ್ತಬ್ಧ ಚಿತ್ರ ತಯಾರಿಸಲು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಎಪಿಎಂಸಿಯಲ್ಲಿ ಅನುವು ಮಾಡಿಕೊಡಲಾಗಿದೆ. ಸ್ತಬ್ಧ ಚಿತ್ರಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನಿಗದಿಪಡಿಲಾಗಿದೆ.  ಬೆಳಗಾಂ- ಅತಿವೃಷ್ಟಿ ಪ್ರವಾಹದಿಂದ ನಲುಗಿದ ಬೆಳಗಾವಿ. ಬಾಗಲಕೋಟ –ಅತಿವೃಷ್ಟಿ ಹಾಗೂ ಪುನರ್ ವಸತಿ ಕಾರ್ಯ, ಧಾರವಾಡ ಸಾಂಸ್ಕೃತಿಕ ವೈಭವ, ಹಾವೇರಿ-ಶಂಖನಾದ ಮೊಳಗಿಸುತ್ತಿರುವ ಕನಸಕದಾಸರು, ಗದಗ- ಬೇಟಿ ಪಡಾವೋ, ಬೇಟಿ ಬಚಾವೋ, ಉತ್ತರಕನ್ನಡ-ಕದಂಬ, ಬನವಾಸಿ, ಮಧುಕೇಶ್ವರ ದೇವಸ್ಥಾನ/ಮಾಗೋಡು ಜಲಪಾತ, ವಿಜಯಪುರ-ವಚನ ಪಿತಾಮಹ ಫ.ಗು.ಹಳಕಟ್ಟಿ, ಬೆಂಗಳೂರು ನಗರ-ಇಸ್ರೋ ಚಂದ್ರಯಾನ-2, ಬೆಂಗಳೂರು ಗ್ರಾಮಾಂತರ-ಸ್ವಚ್ಛತೆಯ ಕಡೆಗೆ ನಮ್ಮ ನಡಿಗೆ, ಚಿತ್ರದುರ್ಗ-ಹೆಣ್ಣು ಭ್ರೂಣ ಹತ್ಯೆ ತಡೆಯ ಕುರಿತು ಹಾಗೂ ಮಹಿಳಾ ಸಾಧಕರು, ದಾವಣಗೆರೆ-ಏರ್ ಸ್ಟ್ರೈಕ್, ಕೋಲಾರ-ಅಂತರಗಂಗೆ, ಶಿವಮೊಗ್ಗ-ಫಿಟ್ ಇಂಡಿಯಾ, ತುಮಕೂರು- ಸಮಗ್ರ ಕೃಷಿ ಪದ್ಧತಿ ಹಾಗೂ ನಡೆದಾಡುವ ದೇವರು, ರಾಮನಗರ-ಮಳೂರು ಅಂಬೆಗಾಲು ಕೃಷ್ಣ, ಚಿಕ್ಕಬಳ್ಳಾಪುರ ರೇಷ್ಮೆ ಮತ್ತು ಹೆಚ್ ನರಸಿಂಹಯ್ಯ, ಗುಲ್ಬರ್ಗ-ಆಯುಷ್ಮಾನ್ ಭಾರತ್, ಬಳ್ಳಾರಿ- ಹಂಪಿಯ ವಾಸ್ತು ಶಿಲ್ಪ, ಬೀದರ್-ಫಸಲ್ ಭೀಮಾ ಯೋಜನೆ, ಕೊಪ್ಪಳ-ಗವಿಸಿದ್ದೇಶ್ವರ ಬೆಟ್ಟ, ರಾಯಚೂರು-ಗೂಗಲ್ ಬ್ರಿಡ್ಜ್ ಪ್ರಧಾನ ಮಂತ್ರಿ ಸಂಚಯಿ ಯೋಜನೆ ಹಾಗೂ ನರೇಗಾ ಯೋಜನೆಗಳು, ಯಾದಗಿರಿ -ಅಂಬಿಗರ ಚೌಡಯ್ಯ, ಮೈಸೂರು-ಜಯಚಾಮರಾಜ ಒಡೆಯರ್ ಅವರ 100ವರ್ಷದ ಸಾಧನೆ,ಚಾಮರಾಜನಗರ ಸಮೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ, ಚಿಕ್ಕಮಗಳೂರು-ಶಿಶಿಲ ಬೆಟ್ಟ, ದಕ್ಷಿಣ ಕನ್ನಡ- ಮಂಗಳಾದೇವಿ ಹಾಗೂ ಭಾರತದ ಅತಿ ದೊಡ್ಡ ಪೆಟ್ರೋಲಿಯಂ ಘಟಕ, ಹಾಸನ-ಎತ್ತಿನಹೊಳೆ ಯೋಜನೆ, ಕೊಡಗು-ಗುಡ್ಡ ಕುಸಿತ ಜಾಗೃತಿ, ಮಂಡ್ಯ-ಶ್ರೀ ಆದಿ ಚುಂಚನಗಿರಿ ಸಂಸ್ಥಾನ ಮಠ, ಉಡುಪಿ- ಶ್ರೀಕೃಷ್ಣಮಠದ ಗೋಪುರ, ದಸರಾ ಉಪ ಸಮಿತಿ- ಆನೆ ಬಂಡಿ, ದಸರಾ ಉಪಸಮಿತಿ- ಜೆಎಸ್ ಎಸ್ ಮಠ, ವಾರ್ತಾ ಇಲಾಖೆ –ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ, ದಸರಾ ಉಪಸಮಿತಿ-ಮೆಮೊ ರೈಲು, ಉಡಾನ್ ಹತ್ತು ಪಥದ ರಸ್ತೆ, ಜಿಲ್ಲಾಡಳಿತ ಸಾಮಾಜಿಕ ನ್ಯಾಯ, ಕಾವೇರಿ ನೀರಾವರಿ ನಿಗಮ- ಕಾವೇರಿ ನೀರಾವರಿ ನಿಗಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಪೋಷಣ ಅಭಿಯಾನ,ರಕ್ತ ಹೀನತೆ ಮುಕ್ತ ಭಾರತ, ಪ್ರವಾಸೋದ್ಯಮ ಇಲಾಖೆ-ನಿಮ್ಮ ಸಾಸಹ ಗಾಥೆಯನ್ನು ನೀವೇ ರಚಿಸಿ, ಮೈಸೂರು ವಿಶ್ವವಿದ್ಯಾನಿಲಯ-ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳು ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅರುಣ್ ಗೌಡ, ಪಾಂಡೆ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: