ಮನರಂಜನೆ

  ‘ಬಿಸಿನೆಸ್ ಆಫ್ ಫ್ಯಾಶನ್ 500’ ಲಿಸ್ಟ್ ಗೆ ಸೇರ್ಪಡೆಗೊಂಡ  ಭಾರತದ ಏಕೈಕ ನಟಿ ಬಾಲಿವುಡ್ ನ ದೀಪಿಕಾ ಪಡುಕೋಣೆ

ದೇಶ(ನವದೆಹಲಿ)ಅ.4:- ಬಾಲಿವುಡ್ ಇಂಡಸ್ಟ್ರೀಯಲ್ಲಿ  ಅತ್ಯಂತ ಸುಂದರ ಮತ್ತು ಫಿಟ್ ನಟಿಯರಲ್ಲಿ ದೀಪಿಕಾ ಪಡುಕೋಣೆ ಒಬ್ಬರು. ದೀಪಿಕಾ ಅವರ ನಟನೆಯ ಜೊತೆಗೆ, ಜನರು ಅವರ ಫ್ಯಾಷನ್ ಪ್ರಜ್ಞೆ ಮತ್ತು ಶೈಲಿಯನ್ನು ಹೊಗಳುವುದರಲ್ಲಿ ಹಿಂದೆ ಬೀಳುವುದಿಲ್ಲ.  ದೀಪಿಕಾ ಪಡುಕೋಣೆ ಅವರ ಜನಪ್ರಿಯತೆಗೆ ಯಾವುದೇ ಮಿತಿಯಿಲ್ಲ. ನಿಸ್ಸಂದೇಹವಾಗಿ  ಅವರು ಜಾಗತಿಕ ಐಕಾನ್ ನಟಿ.

ಇದರೊಂದಿಗೆ ದೀಪಿಕಾ ‘ಬಿಸಿನೆಸ್ ಆಫ್ ಫ್ಯಾಶನ್’  ನಲ್ಲಿ  ಏಕೈಕ ಭಾರತೀಯ ನಟಿಯಾಗಿ ಸೇರ್ಪಡೆಗೊಂಡು ಮತ್ತೊಂದು ಸಾಧನೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅವರಲ್ಲದೆ, ಭಾರತೀಯ ಫ್ಯಾಷನ್ ಉದ್ಯಮಿ ಸಂಜೀವ್ ಭಾಲ್ ಅವರ ಹೆಸರನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರು ಸ್ಯಾಟೆಕ್ಸ್‌ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕರು.

ಕೇನ್ಸ್ ಚಲನಚಿತ್ರೋತ್ಸವದಲ್ಲಿನ ಡ್ರೆಸ್ಸಿಂಗ್ ಶೈಲಿಯಿಂದಾಗಿ ಎಲ್ಲರ ಹೃದಯಗಳನ್ನು ಗೆದ್ದ ದೀಪಿಕಾ, 2018 ರ ಮೊದಲು ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದರು. ಬಿಸಿನೆಸ್ ಆಫ್ ಫ್ಯಾಶನ್ & ಹೈಲೈಟ್ಸ್ 500 ರ ಪಟ್ಟಿಯನ್ನು ವಿಶೇಷ ವೃತ್ತಿಪರ ಸೂಚ್ಯಂಕವಾಗಿ ನೋಡಲಾಗುತ್ತದೆ.

ದೀಪಿಕಾ ಪಡುಕೋಣೆ ಭಾರತೀಯ ನಟಿಯಾಗಿದ್ದು, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಮೊದಲಿಗರಾಗಿದ್ದಾರೆ.   ಶೀಘ್ರದಲ್ಲೇ ಆಸಿಡ್ ಅಟ್ಯಾಕ್ ಸರ್ವೈವರ್ ಲಕ್ಷ್ಮಿ ಅಗರ್ವಾಲ್ ಅವರ ಜೀವನವನ್ನು ಆಧರಿಸಿದ ಮೇಘನಾ ಗುಲ್ಜಾರ್ ಅವರ ‘ಛಪಾಕ್’ ನಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸಿ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರವು ಜನವರಿ 10, 2020 ರಂದು ತೆರೆ ಕಾಣಲಿದೆ. (ಎಸ್.ಎಚ್)

Leave a Reply

comments

Related Articles

error: