ಮೈಸೂರು

ಬಂಡೀಪುರ ತಲುಪಿದ ಸೇಫ್’ವೀಲ್ಸ್ ನೆರವು; ಅಧಿಕಾರಿಗಳಿಗೆ ಹಸ್ತಾಂತರ

ಮೈಸೂರು : ಅಗ್ನಿ ಅನಾಹುತ ಸಂಭವಿಸಿ ಸಂಕಷ್ಟಕ್ಕೆ ಸಿಲುಕಿರುವ ಬಂಡೀಪುರ ಅರಣ್ಯ ಪ್ರದೇಶದ ಸಂತ್ರಸ್ತರು ಮತ್ತು ಬೆಂಕಿ ಆರಿಸುವ ಕಾರ್ಯದಲ್ಲಿ ಪಾಲ್ಗೊಂಡಿರುವ ಸರ್ಕಾರಿ ಸಿಬ್ಬಂದಿಗೆ ಮೈಸೂರಿನ ಸರಸ್ವತಿಪುರಂನಲ್ಲಿರುವ ಸೇಫ್’ವೀಲ್ಸ್ ಸಂಸ್ಥೆಯ ವತಿಯಿಂದ ಅಗತ್ಯ ವಸ್ತುಗಳ ಕಿರು ಸೇವೆಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ತುರ್ತು ಅಗತ್ಯಗಳಾದ ನೀರು, ಬ್ರೆಡ್-ಜಾಮ್, ಹಣ್ಣುಗಳು, ಕಾಡಿನ ಕತ್ತಲಲ್ಲಿ ದಾರಿ ನೋಡಲು ಬೆಳಕು ತೋರುವ ಉತ್ತಮ ಗುಣಮಟ್ಟದ ಟಾರ್ಚ್‍’ಗಳು ಸೇರಿದ ಪರಿಹಾರ ಸಾಮಗ್ರಿಗಳನ್ನು ಕಿರು ಸೇವೆ ಒಳಗೊಂಡಿತ್ತು. ಸಂಸ್ಥೆಯೇ ನೇರವಾಗಿ ಮುತುವರ್ಜಿ ವಹಿಸಿ ವಸ್ತುಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿತು.

Leave a Reply

comments

Related Articles

error: