ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್ ನಾಯಕರ ದುರಾಡಳಿತ ಬಯಲಾಗಿದೆ: ಅಶ್ವತ್ಥನಾರಾಯಣ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ದುರಾಡಳಿತದ ಸಾಕ್ಷಿಗಳು ಡೈರಿಯ ಮೂಲಕ ಬಹಿರಂಗವಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ್ ತಿಳಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡೈರಿ ಬಿಡುಗಡೆ ನಂತರ ಹತಾಶರಾಗಿರುವ ಕಾಂಗ್ರೆಸ್ ನಾಯಕರು ನಕಲಿ ದಾಖಲೆಗಳನ್ನು ಅವಲಂಬಿಸಿದ್ದಾರೆ. ಸಾವಿರ ಕೋಟಿ ರೂಪಾಯಿಗಳ ಕಪ್ಪ ಪಾವತಿ ಕುರಿತು ದೆಹಲಿಯಲ್ಲಿ ಡೈರಿಯ ದಾಖಲೆಗಳು ಬಿಡುಗಡೆಗೊಂಡ ನಂತರ ಸಂಪೂರ್ಣ ಹತಾಶರಾಗಿರುವ ಕಾಂಗ್ರೆಸ್ ಮುಖಂಡರಿಗೆ ದಿಕ್ಕು ತೋಚದಂತಾಗಿದ್ದಾರೆ ಎಂದು ಎಂದರು.

ಮುಖ್ಯಮಂತ್ರಿಯಾಗಲಿ, ಕೆಪಿಸಿಸಿ ಅಧ್ಯಕ್ಷರಾಗಲಿ ಮಾತನಾಡದೇ, ಕೇವಲ ಸಿದ್ದರಾಮಯ್ಯ ಬ್ರಿಗೇಡ್ ಸದಸ್ಯರಾದ ಎಚ್.ಎಂ.ರೇವಣ್ಣ, ಉಗ್ರಪ್ಪ ಮತ್ತು ಐವನ್ ಡಿಸೋಜಾ ಮೂಲಕ ನಕಲಿ ದಾಖಲೆಗಳನ್ನು ಬಿಡುಗಡೆ ಮಾಡಿಸುವ ಯತ್ನ ಮಾಡಲಾಗಿದೆ. ಮುಖ್ಯಮಂತ್ರಿಗಳಿಗೆ ತಪ್ಪು ಮಾಡಿಲ್ಲ ಎನ್ನುವ ಭಾವನೆ ಇದ್ದಿದ್ದರೆ ಸ್ವತಃ ಮುಖ್ಯಮಂತ್ರಿಗಳು ಮಾಧ್ಯಮಗಳ ಮುಂದೆ ಸ್ಪಷ್ಟೀಕರಣ ನೀಡಬೇಕಿತ್ತು. ಸಾವಿರ ಕೋಟಿ ರೂಪಾಯಿಗಳ ಪಾವತಿ ವಿಷಯ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಮುಖ್ಯಮಂತ್ರಿಯೇ ಸುದ್ದಿಗೋಷ್ಠಿ ನಡೆಸಿ ರಾಜ್ಯದ ಜನತೆಗೆ ಉತ್ತರಿಸಬೇಕಾಗಿತ್ತು. ಆದರೆ ಅವರು ತಮ್ಮ ಬ್ರಿಗೇಡ್ ಸದಸ್ಯರನ್ನು ನಕಲಿ ದಾಖಲೆಗಳನ್ನಿಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸುವಂತೆ ಹೇಳಿರುವುದು ಅವರೆಷ್ಟು ಹತಾಶರಾಗಿದ್ದಾರೆನ್ನಲು ಸಾಕ್ಷಿ ಎಂದಿದ್ದಾರೆ.

2013ರಲ್ಲಿ ಅಮಿತ್ ಷಾ ಅವರು ಪಕ್ಷದ ಅಧ್ಯಕ್ಷರಾಗಿರಲಿಲ್ಲ. ಮುರಳೀಧರಾವ್ ಅವರು ಕೂಡಾ ರಾಜ್ಯದ ಉಸ್ತುವಾರಿ ಹೊಣೆ ಹೊತ್ತಿರಲಿಲ್ಲ. ಅಲ್ಲದೇ ಮೋದಿಯವರು ಇನ್ನೂ ಪ್ರಧಾನಿ ಹುದ್ದೆಗೇರಿರಲಿಲ್ಲ. ‘ನಮೋ’  ಎನ್ನುವ ಹೆಸರನ್ನು ಆಗ ಬಳಸುತ್ತಿರಲಿಲ್ಲ. ಡೈರಿಯಲ್ಲಿ ಸಹಿ ಮಾಡಿದ್ದಾರೆನ್ನಲಾದ ಲೆಹರ್ಸಿಂಗ್ ಅವರೂ ಕೂಡಾ, ಡೈರಿ ಬರೆಯುವ ಅಭ್ಯಾಸವಿಲ್ಲ ಎಂದು ಸ್ಪಷ್ಟಪಡಿಸಿದ್ದು, 2013ರಲ್ಲಿ ಅವರೂ ಸಹ ಪಕ್ಷದಿಂದ ಹೊರಗಿದ್ದರು. ಯಡಿಯೂರಪ್ಪನವರೂ ಆಗ ಕೆಜೆಪಿ ಕಟ್ಟಿದ್ದರು. ಆದರೆ ಇವೆಲ್ಲವನ್ನೂ ಮರೆಮಾಚಿ, ಡೈರಿಯಲ್ಲಿ ಹಣ ಪಾವತಿಸಿದಂತೆ ದಾಖಲೆ ಸೃಷ್ಟಿಸಲಾಗಿದೆ ಎಂದಿದ್ದಾರೆ.

ಲೆಹರ್ಸಿಂಗ್ ಸಹಿಯ ಆರಂಭದಲ್ಲಿ ‘La’ ಎಂದಿದೆ. ಆದರೆ ಅವರು ‘Le’ ಎಂದು ಬರೆಯತ್ತಾರೆ. ಅವರ ಸಹಿಯನ್ನು ನಕಲು ಮಾಡಲಾಗಿದ್ದು, ಈ ಕುರಿತು ಅವರೇ ಸ್ಪಷ್ಟನೆ ನೀಡಲಿದ್ದಾರೆ. ಹಾಗೂ ದೂರು ದಾಖಲಿಸಲಿದ್ದಾರೆ ಎಂದು ಹೇಳಿದರು.

Leave a Reply

comments

Related Articles

error: