ಮೈಸೂರು

ಕೇರಳ ಪಿತೂರಿಗೆ ಮಣಿಯಬಾರದು,ಬಂಡೀಪುರ ಅರಣ್ಯವನ್ನು ಉಳಿಸಬೇಕೆಂದು ಒತ್ತಾಯಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

ಮೈಸೂರು,ಅ.5:- ಬಂಡೀಪುರ ಅರಣ್ಯವನ್ನು ಉಳಿಸಬೇಕು. ರಾಹುಲ್ ಗಾಂಧೀಯವರನ್ನು ಕರ್ನಾಟಕದಲ್ಲಿ  ಬಹಿಷ್ಕರಿಸಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ  ವಾಟಾಳ್ ನಾಗರಾಜ್ ನಗರದ ಸಿಟಿ ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ  ನಿಷೇಧ ಖಾಯಂ ಮುಂದುವರಿಯಬೇಕು. ಬೇರೆ ಹೊಸ ರಸ್ತೆಗೆ ಅರಣ್ಯದಲ್ಲಿ ಅವಕಾಶ ಕೊಡಬಾರದು. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಬಾರದು. ಕೇರಳ ಪಿತೂರಿಗೆ ಮಣಿಯಬಾರದು. ರಾಹುಲ್ ಗಾಂಧಿ ಬೆಂಬಲವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಇದೇ ವೇಳೆ ಕೇರಳ ಮರದ ಮಾಫಿಯಾ ನಿಲ್ಲಬೇಕು. ಟೈಗರ್ ಪ್ರಾಜೆಕ್ಟ್ ಉಳಿಯಬೇಕು. ಆನೆಗಳು, ಚಿರತೆಗಳು ಸಂತತಿ ನಾಶವಾಗಬಾರದು. ಕಾಡುಪ್ರಾಣಿಗಳ ರಕ್ಷಣೆ ನಮ್ಮ ಸಿದ್ದಾಂತ. ಕಾಡಿನ ರಕ್ಷಣೆ ನಮ್ಮ ಕರ್ತವ್ಯ. ಕೇರಳದ ಪಿತೂರಿಗೆ ನಾವು ಬಗ್ಗಬಾರದು. ಬೇರೆ ಕಡೆಯಿಂದ ಕಾಡನ್ನು ನಾಸ ಮಾಡಿ ರಸ್ತೆ ಮಾಡಲು ಹೊರಟಿರುವುದು ಸರಿಯಲ್ಲ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: