ಕ್ರೀಡೆ

ನಿವೃತ್ತಿ ಸುದ್ದಿಯನ್ನು ತಳ್ಳಿಹಾಕಿದ ಹರ್ಭಜನ್ ಸಿಂಗ್

ಮುಂಬೈ,ಅ.5-ನಿವೃತ್ತಿ ಕುರಿತಾದ ಸುದ್ದಿಯನ್ನು ತಳ್ಳಿಹಾಕಿರುವ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಪರವಾಗಿ ಐಪಿಎಲ್ ಆಡುವುದಾಗಿ ಹೇಳಿದ್ದಾರೆ.

ಇಂಗ್ಲೆಂಡ್ ನಲ್ಲಿ ನಡೆಯಲಿರುವ ಹೊಸ ಫ್ರಾಂಚೈಸಿ ಲಿಗ್ ‘ದಿ ಹಂಡ್ರೆಡ್’ ನಲ್ಲಿ ಹರ್ಭಜನ್ ಹೆಸರು ನೋಂದಾಯಿಸಿರುವುದರಿಂದ ಟರ್ಬನೇಟರ್ ಬಿಸಿಸಿಐಗೆ ವಿದಾಯ ನೀಡುತ್ತಾರೆ ಎಂದು ಹೇಳಲಾಗಿತ್ತು. ಬಿಸಿಸಿಐ ಆಡಳಿತದಡಿಯಲ್ಲಿ ಬರುವ ಯಾವುದೇ ಆಟಗಾರ ವಿದೇಶಿ ಟೂರ್ನಮೆಂಟ್ ಆಡುವಂತಿಲ್ಲ. ಹೀಗಾಗಿ ಹರ್ಭಜನ್ ವಿದಾಯ ಹೇಳುತ್ತಾರೆ ಎಂದು ವರದಿಯಾಗಿತ್ತು.

ನಾನು ನಿವೃತ್ತಿಯಾಗುತ್ತಿಲ್ಲ. ‘ದಿ ಹಂಡ್ರೆಡ್’ ಡ್ರಾಫ್ಟ್ ನಿಂದ ಹೆಸರು ಹಿಂದೆ ಪಡೆದಿದ್ದೇನೆ. ಒಂದು ವೇಳೆ ಐಪಿಎಲ್ ಮತ್ತು ‘ದಿ ಹಂಡ್ರೆಡ್’ ನಡುವೆ ಆಯ್ಕೆ ಬಂದರೆ ನಾನು ಖಂಡಿತ ಐಪಿಎಲ್ ಅನ್ನು ಆಯ್ದುಕೊಳ್ಳುತ್ತೇನೆ ಎಂದು ವರ್ಷದ ಪಂಜಾಬ್ ಸ್ಪಿನ್ನರ್ ಹೇಳಿದ್ದಾರೆ. ಹರ್ಭಜನ್ 2016ರ ಏಷ್ಯಾ ಕಪ್ ನಲ್ಲಿ ಕೊನೆಯದಾಗಿ ಭಾರತದ ಪರವಾಗಿ ಆಡಿದ್ದರು. (ಎಂ.ಎನ್)

Leave a Reply

comments

Related Articles

error: