ಕ್ರೀಡೆ

ಶತಕ ಸಿಡಿಸಿದ ರೋಹಿತ್ ಶರ್ಮಾ: ಬೃಹತ್ ಮುನ್ನಡೆಯತ್ತ ಭಾರತ

ವಿಶಾಖಪಟ್ಟಣ,.5-ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲೂ ರೋಹಿತ್ ಶರ್ಮಾ ಶತಕ ಸಿಡಿಸಿದ್ದಾರೆ.

ರೋಹಿತ್ ಶರ್ಮಾರ ಶತಕ ಚೇತೇಶ್ವರ ಪೂಜಾರ (84) ಆಕರ್ಷಕ ಅರ್ಧಶತಕದ ನೆರವಿನಿಂದ ನಾಲ್ಕನೇ ದಿನದಾಟದಲ್ಲಿ ಭಾರತ ಬೃಹತ್ ಮುನ್ನಡೆಯನ್ನು ದಾಖಲಿಸಿದೆ.

ದಕ್ಷಿಣ ಆಫ್ರಿಕಾ ಬೌಲರ್ಗಳನ್ನು ದಂಡಿಸುತ್ತಲೇ ಸಾಗಿದ ರೋಹಿತ್ ಶರ್ಮಾ ಮಗದೊಂದು ಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ ಪಂದ್ಯದ ಎರಡು ಇನ್ನಿಂಗ್ಸ್ಗಳಲ್ಲೂ ಶತಕ ಮೆರೆದರು. ಟೆಸ್ಟ್ ಆರಂಭಿಕನಾದ ಮೊದಲ ಪಂದ್ಯದಲ್ಲೇ ರೋಹಿತ್ ಸಾಧನೆ ಮಾಡಿರುವುದು ವಿಶೇಷ.

ರೋಹಿತ್ ಶರ್ಮಾಗೆ ಉತ್ತಮ ಬೆಂಬಲ ನೀಡಿದ ಚೇತೇಶ್ವರ ಪೂಜಾರ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಪೂಜಾರ ಬಳಿಕ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಅಲ್ಲದೆ ರೋಹಿತ್ ಜತೆಗೆ ಶತಕದ ಜತೆಯಾಟದಲ್ಲಿ ಭಾಗಿಯಾದರು. ಇನ್ನೊಂದೆಡೆ ಮೊದಲ ಇನ್ನಿಂಗ್ಸ್ನಲ್ಲಿ ವೈಫಲ್ಯ ಅನುಭವಿಸಿದರೂ ದ್ವಿತೀಯ ಇನ್ನಿಂಗ್ಸ್ನಲ್ಲಿ ಫಿಫ್ಟಿ ಬಾರಿಸುವ ಮೂಲಕ ಪೂಜಾರ ರನ್ ಬರವನ್ನು ನೀಗಿಸಿದರು.

ಟೀ ವಿರಾಮದ ಹೊತ್ತಿಗೆ ಭಾರತ 48 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು ಇದರೊಂದಿಗೆ ಭಾರತ ಒಟ್ಟು ಮುನ್ನಡೆಯನ್ನು 246 ರನ್ಗಳಿಗೆ ಏರಿಸಿದೆ.

ಟೀ ವಿರಾಮದ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಚೇತೇಶ್ವರ ಪೂಜಾರ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಇದರಿಂದಾಗಿ 19 ರನ್ ಅಂತರದಿಂದ ಶತಕ ಮಿಸ್ ಮಾಡಿಕೊಂಡರು. ಆಗಲೇ ರೋಹಿತ್ ಜತೆಗೆ ದ್ವಿತೀಯ ವಿಕೆಟ್ಗೆ 169 ರನ್ಗಳ ಜತೆಯಾಟವನ್ನು ನೀಡಿದರು. 148 ಎಸೆತಗಳನ್ನು ಎದುರಿಸಿದ ಪೂಜಾರ 13 ಬೌಂಡರಿ ಹಾಗೂ ಎರಡು ಸಿಕ್ಸರ್ಗಳಿಂದ 81 ರನ್ ಗಳಿಸಿದರು. (ಎಂ.ಎನ್)

Leave a Reply

comments

Related Articles

error: