ಪ್ರಮುಖ ಸುದ್ದಿಮನರಂಜನೆಮೈಸೂರು

ಸ್ಯಾಂಡಲ್ ವುಡ್ ನೈಟ್ ನಲ್ಲಿ ಯುವ ಸಮೂಹದ ಹರ್ಷೋದ್ಘಾರ

ಮೈಸೂರು ಅ.6:-  ಕನ್ನಡ ಚಲನಚಿತ್ರ ಖ್ಯಾತ ಕಲಾವಿದರ ಸ್ಯಾಂಡಲ್‍ವುಡ್ ನೈಟ್ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟ ನಟಿಯರ ಆಗಮನದಿಂದ  ಅದರಲ್ಲೂ ಮಹಾರಾಜ ಕಾಲೇಜು‌ ಮೈದಾನ ತುಂಬೆಲ್ಲಾ ನೆಚ್ಚಿನ ನಟ ನಟಿಯರ ಪರ ಯುವ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ನಿನ್ನೆ  ಯುವ ದಸರಾ ಅಕ್ಷರಸಹ ಕನ್ನಡ ಚಿತ್ರರಂಗದ ನಟ ನಟಿಯರ ವೇದಿಕೆಯಾಗಿ, ಮೈದಾನ ತುಂಬಾ ಅಭಿಮಾನಿಗಳ ಅಭಿಮಾನ‌ ಶಿಳ್ಳೆ, ಚಪ್ಪಾಳೆ, ಕೇಕೆಯಿಂದ ತುಂಬಿ‌ ತುಳುಕಿತ್ತು.

ನಟಿಯರಾದ ಅನುಪಮ, ಕಾರುಣ್ಯರಾಮ್, ಶಾನ್ವಿ, ನಿಧಿಸುಬ್ಬಯ್ಯ, ಹರ್ಷಿಕಾ ಪೂಣಚ್ಚ ಹಾಗೂ‌ ದಿಗಂತ್, ಐಂದ್ರಿತಾ ರೇ  ಜೋಡಿಯ ಡ್ಯಾನ್ಸ್ ಪ್ರದರ್ಶನಕ್ಕೆ ಯುವ ಮನುಸುಗಳು ಆಕಾಶದಲ್ಲಿ ತೇಲಾಡುವ ರೀತಿ ಸಂಭ್ರಮಿಸಿದರು. ಸೃಜನ್ ಲೋಕೇಶ್, ತಾರಾ ಅನುರಾಧ, ರಕ್ಷಿತ್ ಶೆಟ್ಟಿ, ಸಾಧು ಕೋಕಿಲಾ, ಶರಣ್, ಡಾಲಿ ಧನಂಜಯ್, ವಸಿಷ್ಠ ಮುಂತಾದ ನಟ ನಟಿಯರು ವೇದಿಕೆಯಲ್ಲಿ ಭರಪೂರ ಮನರಂಜನೆ ನೀಡಿದರು.

ಯುವ ಸಂಭ್ರಮದಿಂದ ಆಯ್ಕೆಯಾದ ಅತ್ಯುತ್ತಮ ತಂಡಗಳಾದ ಹುಣಸೂರಿ ತಾಲೂಕಿನ ಹನಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆ.ಎಸ್.ಎಸ್. ಪದವಿ ಪೂರ್ವ ಕಾಲೇಜು, ಹೆಚ್.ಡಿ.ಕೋಟೆಯ ಏಕಲವ್ಯ ಮಾದರಿ ವಸತಿ ಪದವಿಪೂರ್ವ ಕಾಲೇಜು ಹಾಗೂ ಎಸ್.ವಿ.ಜಿ. ವಿಶ್ವಪ್ರಜ್ಞ ಕಾಂಪೋಸಿಟ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ನೀಡಿದರು.

ಫ್ರೀಕರ್ಸ್ ಡ್ಯಾಮ್ ಅಕಾಡೆಮಿ ಶ್ರೀ ಶಾಸ್ತಾ ತಂಡದಿಂದ ನೃತ್ಯ, ಅಂಬಾರಿ ಮತ್ತು ಐಕ್ಯಾನ್ ತಂಡದಿಂದ ನೃತ್ಯ ಕಾರ್ಯಕ್ರಮ, ಶ್ರೀಧರ್ ಜೈನ್ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ಎಲ್ಲರ ‌ಹೃದಯ ಗೆದ್ದಿತು.

ರೋಲಿಂಗ್ ಮೀಡಿಯಾ ದವರಿಂದ ನಮ್ಮೂರು ಮೈಸೂರು ಸಂಗೀತ ಕಾರ್ಯಕ್ರಮಕ್ಕೆ ಮೈಸೂರು ಜನತೆಯ ಹರ್ಷೋದ್ಘಾರ ಮುಗಿಲು ಮುಟ್ಟಿತು. ಕೆ.ಎಸ್.ಐ.ಸಿ. ಪ್ರಾಯೋಜಿತ ಮೈಸೂರು ಸಿಲ್ಕ್ ಸ್ಯಾರಿಯ ಫ್ಯಾಶನ್ ಶೋ ಗೆ ಯುವ ಮನುಸುಗಳು‌ ಕರಗಿದವು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: