ಪ್ರಮುಖ ಸುದ್ದಿಮೈಸೂರು

 ಕಣ್ಮನ ಸೂರೆಗೊಂಡ ಪೊಲೀಸ್ ಬ್ಯಾಂಡ್ ಪ್ರದರ್ಶನ

ಮೈಸೂರು, ಅ. 6:-  ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಮುಂಭಾಗ ಕರ್ನಾಟಕ  ಪೋಲಿಸ್  ಬ್ಯಾಂಡ್ ನಿಂದ ನಿನ್ನೆ ಸಂಜೆ ಆಕರ್ಷಕ ಸಮೂಹ ಪೊಲೀಸ್  ಬ್ಯಾಂಡ್ ಪ್ರದರ್ಶನ ನಡೆಯಿತು.
ಒಟ್ಟು 36 ವಿವಿಧ ಪೋಲಿಸ್  ತಂಡಗಳಿಂದ ಒಟ್ಟು 450 ವಾದ್ಯ ವಾದಕರು ವಿಶ್ವದ ಜನಪ್ರಿಯ  ಗೀತೆಗಳನ್ನ ವಿವಿಧ ವಿಶೇಷ ವಾದ್ಯಗಳ ಮೂಲಕ ಮನಮುಟ್ಟುವಂತೆ ಪ್ರಸ್ತುತಪಡಿಸಿದರು.
ಜಲಪಕ್ಷೀ, ರಾಯಲ್ ಕಿಂಗ್ , ಬೇಲಿಜೀಮ್ ಪ್ರಸ್ತುತಿ ಪ್ರೇಕ್ಷಕರ ಗಮನ ಸೆಳೆದವು. ಕನ್ನಡ  ಶಾಸ್ತ್ರಿಯ ಸಂಗೀತ ಹಾಗೂ  ಇಂಗ್ಲಿಷ್  ಬ್ಯಾಂಡ್ ಗಳ ಜುಗಲ್ ಬಂದಿಯಂತೂ ನೋಡುಗರ ಕಣ್ಮನ ತಣಿಸಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ್ ಎಚ್. ಶಾಂತನಗೌಡರು ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಿ. ಕಲ್ಪನ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು, ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮೊದಲಾದವರು ಪೊಲೀಸ್ ಬ್ಯಾಂಡ್ ಪ್ರದರ್ಶನ ವೀಕ್ಷಿಸಿದರು.

ಬಿಗ್ ಬ್ಯಾಂಡ್ ವಿಭಾಗದಲ್ಲಿ ಮೈಸೂರಿನ ಕೆಎಸ್ಆರ್ ಪಿ 5ನೇ ಪಡೆ – ಪ್ರಥಮ ಸ್ಥಾನ,ಹಾಸನದ ಕೆಎಸ್ಆರ್ ಪಿ 11ನೇ ಪಡೆ – ದ್ವಿತೀಯ ಸ್ಥಾನ, ಸ್ಮಾಲ್ ಬ್ಯಾಂಡ್ ವಿಭಾಗದಲ್ಲಿ ಉಡುಪಿ ಡಿಎಆರ್ – ಪ್ರಥಮ ಸ್ಥಾನ, ಬಾಗಲಕೋಟೆ – ದ್ವಿತೀಯ ಸ್ಥಾನ, ಮೀಡಿಯಂ ಬ್ಯಾಂಡ್ ವಿಭಾಗದಲ್ಲಿ  ಸಿಎಆರ್ ಬೆಂಗಳೂರು – ಪ್ರಥಮ ಸ್ಥಾನ, ಕೆಎಸ್ಆರ್ ಪಿ ಬೆಂಗಳೂರು – ದ್ವಿತೀಯ ಸ್ಥಾನ,  ಪೈಪ್ ಬ್ಯಾಂಡ್  ವಿಭಾಗದಲ್ಲಿ  ಡಿಎಆರ್ ಮಂಡ್ಯ, ವಿಶೇಷ ಬಹುಮಾನವನ್ನು  ಬ್ರಿಟಿಷ್ ಬ್ಯಾಂಡ್ ತಂಡ ಹಾಗೂ ಕರ್ನಾಟಕ ವಾದ್ಯ ವೃಂದ ಪಡೆದುಕೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: