ಮೈಸೂರು

 ಅಭಿನವ ರಾಮಾನುಜಮ್‍ ರಿಗೆ ಗೌರವ ಡಾಕ್ಟರೇಟ್

ಮೈಸೂರು, ಅ.6:- ನಗರದ ಕೆ.ಆರ್.ಎಸ್. ರಸ್ತೆಯಲ್ಲಿರುವ ಸಾದನಹಳ್ಳಿ ಸಪ್ತರ್ಷಿ ವೈದಿಕ ಗುರುಕುಲ ಸೇವಾಶ್ರಮದ ಸಂಸ್ಥಾಪಕ ಗೌರವ ಅಧ್ಯಕ್ಷರಾದ ಅಭಿನವ ರಾಮಾನುಜಮ್‍ ರಿಗೆ ಇಂಟರ್‍ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿಯು ಇವರ ಸಾಮಾಜಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಸೇವಾ ಕಾರ್ಯಗಳನ್ನು ಗುರುತಿಸಿ 2019-20ನೇ ಸಾಲಿನ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಅಭಿನವ ರಾಮಾನುಜಮ್‍ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ಆಶ್ರಮದ  ಎಲ್ಲಾ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ. (ಎಸ್.ಎಚ್)

Leave a Reply

comments

Related Articles

error: