ಪ್ರಮುಖ ಸುದ್ದಿಮೈಸೂರು

ಆಲೂಗಡ್ಡೆಯಿಂದ ಶ್ರೀಮಂತರಾದವರು ಕುಮಾರಸ್ವಾಮಿ : ಹರಿಹಾಯ್ದ ಸಂಸದೆ ಶೋಭಾ ಕರಂದ್ಲಾಜೆ

ಮೈಸೂರು,ಅ.7:- ಸಂಸದೆ ಶೋಭಾಕರಂದ್ಲಾಜೆಗೆ ರೈತರ ಕಷ್ಟ ಏನು ಅಂತಾ ಗೊತ್ತಾ ಎಂದು ಟೀಕಿಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ನಮ್ಮ ಊರು ಯಾವುದೆಂದು ಬಂದು ನೋಡಲಿ. ಆಗ ರೈತರು ಯಾರು , ಯಾರು ರೈತರಲ್ಲ ಎಂದು ತಿಳಿಯುತ್ತದೆ ಎಂದು ಟಾಂಗ್ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಆಲೂಗಡ್ಡೆಯಿಂದ ಶ್ರೀಮಂತರಾದವರು ಎಂದು ಹರಿಹಾಯ್ದರು.

ಸಂಸದರ ಮೇಲಿನ ಟೀಕೆಗಳಿಗೆ ನಮ್ಮ ಬಳಿ ಉತ್ತರ ಇಲ್ಲಕೆಲಸ ಮಾಡುವುದೇ ನಮ್ಮ ಗುರಿ. ನೆರೆ ಪರಿಹಾರ ಈಗಾಗಲೇ ಬಿಡುಗಡೆಯಾಗಿದೆ. ಎರಡನೇ ಕಂತು ಮತ್ತು ಮೂರನೇ ಕಂತು ಸಹ ಬಿಡುಗಡೆಯಾಗುತ್ತದೆ. ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: