ಪ್ರಮುಖ ಸುದ್ದಿಮೈಸೂರು

ಸುತ್ತೂರು ಶಾಖಾ ಮಠದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಸಿಎಂ ಬಿಎಸ್ ವೈ

ಮೈಸೂರು,ಅ.8:- ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಸಿ.ಎಂ‌. ಬಿ.ಎಸ್.ಯಡಿಯೂರಪ್ಪ ಚಾಮುಂಡಿಬೆಟ್ಟದ  ಸುತ್ತೂರು ಶಾಖಾ ಮಠದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.

ಮಠಕ್ಕೆ ಆಗಮಿಸಿದ ಸಿ.ಎಂ.ಗೆ ಪೂರ್ಣಕುಂಭದ  ಅದ್ಧೂರಿ ಸ್ವಾಗತ ನೀಡಲಾಯಿತು. ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರೊಂದಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ  ಮುಖ್ಯಮಂತ್ರಿ ಯಡಿಯೂರಪ್ಪ  ಬಳಿಕ ಶ್ರೀಗಳೊಂದಿಗೆ  ಮಾತುಕತೆ ನಡೆಸಿದರು. ಸಚಿವರಾದ ನಾಗೇಶ್, ಸಿ.ಟಿ, ರವಿ, ಸೋಮಣ್ಣ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು. ಮಠದಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: