ಪ್ರಮುಖ ಸುದ್ದಿಮೈಸೂರು

240 ಕೆಜಿ ತೂಕ ಹೆಚ್ಚಿಸಿಕೊಂಡ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ  ಕ್ಯಾಪ್ಟನ್ ಅರ್ಜುನ

ಮೈಸೂರು,ಅ.8:-  ಮೈಸೂರು ದಸರಾ ಹಿನ್ನೆಲೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ  ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯ ಆನೆಗಳಿಗೆ ಅಂತಿಮ ತೂಕ ಪರೀಕ್ಷೆ  ನಡೆಸಲಾಯಿತು.

ಕಾಡಿನಿಂದ ನಾಡಿಗೆ ಬಂದ ವೇಳೆ ಅರ್ಜುನ ಅಂಡ್ ಟೀಂಗೆ ತೂಕ ಪರೀಕ್ಷೆ ನಡೆಸಲಾಗಿತ್ತು. ಬಳಿಕ ದಸರಾ ಗಜಪಡೆಯ ಆನೆಗಳಿಗೆ ದಿನ ನಿತ್ಯ ತಾಲೀಮು ನಡೆಸಿ ಉತ್ತಮ ಆಹಾರ ನೀಡಲಾಗಿತ್ತು. ಹೀಗಾಗಿ ಅರ್ಜುನ ನೇತೃತ್ವದ ಗಜಪಡೆಯ ಆನೆಗಳು ಇದೀಗ ಮೊದಲಿಗಿಂತ ಈಗ ತೂಕವನ್ನು ಹೆಚ್ಚಿಸಿಕೊಂಡಿವೆ.

750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಜಂಬೂ ಸವಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿರುವ ಕ್ಯಾಪ್ಟನ್ ಅರ್ಜುನ ನಾಡಿಗೆ ಬಂದ ವೇಳೆ 5800 ಕೆಜಿ ತೂಕ ಹೊಂದಿದ್ದ. ಈಗ 6040 ಕೆಜಿ ತೂಕವನ್ನು ಹೊಂದಿದ್ದಾನೆ. ಈ ಮೂಲಕ 240 ಕೆಜಿ ತೂಕವನ್ನು ಕ್ಯಾಪ್ಟನ್ ಅರ್ಜುನ ಹೆಚ್ಚಿಸಿಕೊಂಡಿದ್ದಾನೆ.

ಈಶ್ವರ ಬಂದಾಗ 3995 ಕೆಜಿ ಇದ್ದ. ಈಗ 4270 ಕೆಜಿ ತೂಕ ಹೊಂದಿದ್ದಾನೆ. ಧನಂಜಯ ಬಂದಾಗ 4460 ಕೆಜಿ ಇದ್ದ. ಈಗ 4710 ಕೆಜಿ ತೂಕ ತೂಗುತ್ತಿದ್ದಾನೆ.   ವಿಜಯಾ ಬಂದಾಗ 2825 ಕೆಜಿ ಇದ್ದು,  ಈಗ 2970 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾಳೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: