ಮೈಸೂರು

ಹೋಂಸ್ಟೇ ನಿಲ್ಲಿಸುವಂತೆ ಶಾಸಕ ಕೆ.ವೆಂಕಟೇಶ್ ಆಗ್ರಹ

ಬೈಲಕುಪ್ಪೆ : ಸಾರ್ವಜನಿಕ ಹಿತಾಶಕ್ತಿಗೆ ತೊಂದರೆ ಕೊಡುತ್ತಿರುವ ಹೋಂಸ್ಟೇಗಳನ್ನು ಈ ಕೂಡಲೇ ನಿಲ್ಲಿಸಬೇಕೆಂದು ಶಾಸಕ ಕೆ.ವೆಂಕಟೇಶ್ ಆಗ್ರಹಿಸಿದ್ದಾರೆ.

ಅವರು ತಾಲೂಕಿನ ಗಿರುಗೂರು ಗ್ರಾಮದ ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ರೂ.30 ಲಕ್ಷಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಕೊಪ್ಪ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹೋಂಸ್ಟೇಗಳು ತಲೆ ಎತ್ತಿವೆ. ಇವುಗಳು ದಿನನಿತ್ಯ ಬೆಂಕಿ ಹಾಕಿಕೊಂಡು ನೃತ್ಯ ಮಾಡುತ್ತ ಮನೋರಂಜನಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆಂದು ಸಾರ್ವಜನಿಕರು ದೂರು ನೀಡಿರುತ್ತಾರೆ. ಈ ಬಗ್ಗೆ ಪೊಲೀಸರು ಕ್ರಮಕೈಗೊಂಡು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದರು.

ಗಿರಗೂರು ಗ್ರಾಮದಲ್ಲಿ ಮಿಳಿಂದ ಶಾಲೆಯ ಆಡಳಿತ ಮಂಡಳಿಯವರು ಸುಮಾರು 15 ಎಕರೆ ಸರ್ಕಾರಿ ಗ್ರಾಮಠಾಣಾ ಜಾಗವನ್ನು ವಶಪಡಿಸಿಕೊಂಡು ಶಾಲೆ ನಿರ್ಮಿಸಿದ್ದಾರೆ. ಶಾಲೆಯವರಿಗೂ ಅನ್ಯಾಯ ಮಾಡುವುದು ಬೇಡ, ಅವರಿಗೆ 2 ಎಕರೆ ಜಮೀನು ನೀಡಿ ಇನ್ನುಳಿದ ಜಾಗವನ್ನು ನಿವೇಶನಗಳನ್ನಾಗಿ ಮಾಡಿ ಬಡವರಿಗೆ ಹಂಚಿ. ಪಂಚಾಯಿತಿಯವರು ಈ ಬಗ್ಗೆ ನಿರ್ಣಯ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂದು ತಿಳಿಸಿದರು.

ಇದೇ ಸಂದರ್ಭ ಜಿ.ಪಂ.ಸದಸ್ಯ ರಾಜೇಂದ್ರ, ಕೊಪ್ಪ ಗ್ರಾ.ಪಂ.ಅಧ್ಯಕ್ಷ ಸಾವಿತ್ರಿ ರಾಮಣ್ಣ, ತಾ.ಪಂ.ಸದಸ್ಯ ರವಿಮಾನು, ತಾ.ಪಂ.ಇ.ಓ ಕೆ.ಬಸವರಾಜ್, ಎಪಿಎಂಸಿ ಅಧ್ಯಕ್ಷ ರೇವಣ್ಣ, ಮಾಜಿ ಅಧ್ಯಕ್ಷರಾದ ಕೆ.ಹೊಲದಪ್ಪ, ಮುಖಂಡರಾದ ಕೆ.ಮಾದಶೆಟ್ಟಿ, ಶಿವಪ್ರಕಾಶ್, ಚೆನ್ನಕಲ್ ಶೇಖರ್, ರಾಜಯ್ಯ, ರೇಣುಕಾಸ್ವಾಮಿ, ಕಲ್ಯಾಣಪ್ಪ, ಎ.ಇ.ಇ. ಪ್ರಕಾಶ್, ಜೆ.ಇ.ಗಳಾದ ದಿನೇಶ್, ವಿಜಯಕುಮಾರ್, ನಿರ್ಮಲ, ಬಸವೇಗೌಡ, ಸಹಾಯಕ ಕೃಷಿ ನಿರ್ದೇಶಕ ಡಾ.ಎಸ್.ಟಿ.ಚಂದ್ರೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: