ಪ್ರಮುಖ ಸುದ್ದಿವಿದೇಶ

ಅಲ್ ಕಾಯಿದಾ ಉಗ್ರ ಆಸಿಂ ಉಮರ್‌ ಹತ್ಯೆ

ಕಾಬೂಲ್,ಅ.9- ಅಲ್ಕಾಯಿದಾ ಉಗ್ರ ಸಂಘಟನೆಯ ಭಾರತೀಯ ಉಪಖಂಡದ ಮುಖ್ಯಸ್ಥ ಹಾಗೂ ಭಾರತದವನೇ ಆದ ಉಗ್ರ ಆಸಿಂ ಉಮರ್ನನ್ನು ಹತ್ಯೆಗೈಯ್ಯಲಾಗಿದೆ.

ಅಫ್ಘಾನಿಸ್ತಾನ ಮತ್ತು ಅಮೆರಿಕ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆಸಿಂ ಉಮರ್ನನ್ನು ಹತ್ಯೆಗೈದಿರುವುದಾಗಿ ತಿಳಿದುಬಂದಿದೆ. ಅಫ್ಘಾನಿಸ್ಥಾನದ ಹೆಲ್ಮಂಡ್ಪ್ರಾಂತ್ಯದ ತಾಲಿಬಾನಿ ಅಡಗುದಾಣದ ಮೇಲೆ ದಾಳಿ ನಡೆಸಿ ಉಮರ್ನನ್ನು ಹೊಡೆದುರುಳಿಸಲಾಗಿದೆ.

ಓಮರ್ ಜೊತೆಗೆ ಇನ್ನೂ ಆರು ಜನ ಮೋಸ್ಟ್ ಬವಾಂಟೆಡ್ ಉಗ್ರರನ್ನು ಕೊಲ್ಲಲಾಗಿದೆ ಎಂದು ಅಫ್ಘನ್ ಸ್ಥಳೀಯ ಪತ್ರಿಕೆಗಳು ವರದಿ ಮಾಡಿದ್ದು, ಆರು ಉಗ್ರರು ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿ ಅಲ್ ಕಾಯಿದಾ ಬೇರೂರುವಂತೆ ಮಾಡುವ ಸಲುವಾಗಿ 2014 ರಲ್ಲಿ ಅಲ್ ಕಾಯಿದಾ ನಾಯಕ ಐಮನ್ ಅಲ್-ಜವಾಹಿರಿ ಎಕ್ಯೂಐಎಸ್ (ಭಾರತೀಯ ಉಪಖಂಡದಲ್ಲಿ ಅಲ್ ಕಾಯಿದಾ) ರಚನೆ ಬಗ್ಗೆ ಘೋಷಿಸಿದ್ದ. ಸೆ. 23 ರಂದು ನಡೆದ ಕಾರ್ಯಾಚರಣೆಯಲ್ಲಿ ಉಮರ್ ನೊಂದಿಗೆ ಇತರ 6 ಎಕ್ಯೂಐಎಸ್ ಉಗ್ರರನ್ನು (ಹೆಚ್ಚಿನವರು ಪಾಕಿಸ್ತಾನೀಯರು) ಕೂಡ ಹತ್ಯೆಗೈಯ್ಯಲಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: