ಮನರಂಜನೆ

ಹೊಸ ಲುಕ್ ನಲ್ಲಿ ನಟ ಅಜಿತ್: ಫೋಟೋ ವೈರಲ್

ಚೆನ್ನೈ,ಅ.9-ನಟ ಅಜಿತ್ ಅವರ ಹೊಸ ಲುಕ್ ನ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಚೆನ್ನೈನ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಜೊತೆಗೆ ಕ್ಲಿಕ್ಕಿಸಿರುವ ಈ ಫೋಟೋ ವೈರಲ್ ಆಗಿದೆ.

ಫೋಟೋದಲ್ಲಿ ಅಜಿತ್ ಅವರ ಹೊಸ ಲುಕ್ ಬಹಿರಂಗವಾಗಿದೆ. ಇದು ಅಜಿತ್ ಅವರೇನಾ ಎಂಬ ರೀತಿಯಲ್ಲಿದೆ ಅಜಿತ್ ಅವರ ಹೊಸ ಲುಕ್. ಗಡ್ಡ ಶೇವ್ ಮಾಡಿಸಿರುವ ಅವರು ತುಂಬ ಯಂಗ್ ಆಗಿ ಕಾಣುತ್ತಿದ್ದಾರೆ.

ಅಜಿತ್ ತಮ್ಮ ಬಿಳಿ ಕೂದಲು ಹಾಗೂ ಬಿಳಿ ಗಡ್ಡದ ಮೂಲಕ ಟ್ರೆಂಡ್ ಹುಟ್ಟುಹಾಕಿದ್ದ ನಟ. ಆದರೆ, ಇದೀಗ ಅಜಿತ್ ಲುಕ್ ಬದಲಾಗಿದೆ. ಕಪ್ಪು ಕೂದಲು ಹಾಗೂ ಗಡ್ಡ ಶೇವ್ ಮಾಡಿರುವ ಅಜಿತ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಅಜಿತ್ ಅಭಿಮಾನಿಗಳ ಜೊತೆಗೆ ಫೋಟೋಗೆ ಪೋಸ್ ನೀಡಿದ್ದರು. ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ತಮ್ಮ ಮುಂದಿನ ಸಿನಿಮಾಗಾಗಿ ಅಜಿತ್ ಲುಕ್ ಪ್ರಯತ್ನ ಮಾಡಿದ್ದಾರೆ.

ಅಜಿತ್ ಹಿಂದಿಯಪಿಂಕ್ಸಿನಿಮಾದ ರಿಮೇಕ್ ನಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಭ್ ಬಚ್ಚನ್ ನಿರ್ವಹಿಸಿದ್ದ ಪಾತ್ರವನ್ನು ಅಜಿತ್ ಮಾಡಿದ್ದರು. ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಸಿನಿಮಾದ ನಾಯಕಿಯಾಗಿದ್ದರು. (ಎಂ.ಎನ್)

Leave a Reply

comments

Related Articles

error: