ಮೈಸೂರು

ಅ.12 : ಟಿ ಪಿ ವೈದ್ಯನಾಥನ್ ಸಂಸ್ಮರಣ ಕಾರ್ಯಕ್ರಮ

ಮೈಸೂರು,ಅ.9:- ಗಾನಭಾರತೀ ಅಕ್ಟೋಬರ್ 12 ಸಂಜೆ  6ಗಂಟೆಗೆ ಪ್ರಖ್ಯಾತ ಗಾಯಕ ದಿವಂಗತ ಟಿ ಪಿ ವೈದ್ಯನಾಥನ್ ಸಂಸ್ಮರಣ ಕಾರ್ಯಕ್ರಮವನ್ನು ಹಮ್ಮಕೊಂಡಿದೆ.

ಅಂದು ಚೆನ್ನೈನ ಯುವ ಪ್ರತಿಭಾವಂತ ಯುವ ಗಾಯಕ ವಿದ್ವಾನ್ ಪ್ರಸನ್ನ ವೆಂಕಟರಾಮನ್‍ ಅವರ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮವಿರುತ್ತದೆ. ಅವರೊಂದಿಗೆವಿದ್ವಾನ್ ಮತ್ತೂರು ಶ್ರೀನಿಧಿ ವಯೋಲಿನಿನಲ್ಲಿ, ವಿದ್ವಾನ್ ಮೈಸೂರು ಎ ರಾಧೇಶ ಅವರು ಮೃದಂಗದಲ್ಲಿ ಮತ್ತು ವಿದ್ವಾನ್ ಭಾರ್ಗವ ಹಾಲಂಬಿ ಅವರು ಖಂಜಿರಾದಲ್ಲಿ ಸಹಕರಿಸಲಿದ್ದಾರೆ

ವಿದ್ವಾನ್ ಪ್ರಸನ್ನ ವೆಂಕಟರಾಮನ್ ವಿದ್ವಾನ್ ಟಿ ಆರ್ ಬಾಲಮಣಿ ಮತ್ತು ಸಂಗೀತ ಕಲಾನಿಧಿ ಟಿ ಕೆ ಗೋವಿಂದರಾವ್‍ ಅವರಲ್ಲಿ ಸಂಗೀತ ಕಲಿತು ಈಗ ವಿದ್ವಾನ್ ಸಂಜಯ್ ಸುಬ್ರಮಣ್ಯಂ ಅವರ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಮುಂದುವರಿಸಿದ್ದಾರೆ. ಸತತವಾಗಿ ಹಲವು ವರ್ಷಗಳು ಇವರಿಗೆ ಮ್ಯೂಸಿಕ್ ಅಕಾಡೆಮಿಯಲ್ಲಿ ಅತ್ಯುತ್ತಮ ಗಾಯಕ, ಷಣ್ಮುಖ ಸಂಗೀತ ಶಿರೋಮಣಿ, ಹೀಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಆಕಾಶವಾಣಿಯ ‘ಎ’ ದರ್ಜೆಕಲಾವಿದರಾಗಿರುವ ಇವರು ದೇಶ ವಿದೇಶಗಳ ಹಲವು ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇವರು ಮದ್ರಾಸ್‍ ಐಐಟಿಯ ಎಂಟೆಕ್ ಪದವೀಧರರು.

ವಿದ್ವಾನ್ ಮತ್ತೂರು ಶ್ರೀನಿಧಿ ವಿದ್ವಾನ್‍ ಆರ್‍ಆರ್‍ ಕೇಶವಮೂರ್ತಿಯವರಲ್ಲಿ ಕಲಿತು ಈಗ ಆರ್‍ಎನ್‍ ತ್ಯಾಗರಾಜನ್‍ ಅವರಲ್ಲಿ ಕಲಿಯುತ್ತಿದ್ದಾರೆ.  ಹಲವಾರು ಹಿರಿಯ ಕಲಾವಿದರಿಗೆ ಪಕ್ಕವಾದ್ಯ ಸಹಕಾರ ನೀಡಿ ಮೆಚ್ಚುಗೆ ಪಡೆದಿದ್ದಾರೆ. ಯುವ ಪೀಳಿಗೆಯ ಪ್ರಮುಖ ವಯೋಲಿನ್‍ ವಾದಕರು ಎನಿಸಿಕೊಂಡಿದ್ದಾರೆ. ವಿದ್ವಾನ್ ಎ ರಾಧೇಶ್‍ವಿದ್ವಾನ್‍ಪಿ ಜಿ ಲಕ್ಷ್ಮೀನಾರಾಯಣ ಅವರಲ್ಲಿ ಕಲಿತು ಈಗ ಮನ್ನಾರ್‍ ಗುಡಿ ಈಶ್ವರನ್‍ಅವರಲ್ಲಿ ಕಲಿಯುತ್ತಿದ್ದಾರೆ.

ವಿದ್ವಾನ್ ಭಾರ್ಗವ ಹಾಲಂಬಿಯವರು ವಿದ್ವಾನ್ ಉಳ್ಳೂರು ನಾಗೇಂದ್ರ ಉಡುಪ, ಅನಂತರ ವಿದ್ವಾನ್ ಕೆ ಯು.ಜಯಚಂದ್ರರಾವ್, ಈಗ ವಿದ್ವಾನ್ ಸಿ ಪಿ ವ್ಯಾಸವಿಠ್ಠಲ ಅವರಲ್ಲಿ ಕಲಿಕೆ ಮುಂದುವರಿಸುತ್ತಿದ್ದಾರೆ. (ಎಸ್.ಎಚ್)

Leave a Reply

comments

Related Articles

error: