ಮನರಂಜನೆ

ಕಿಚ್ಚ ಸುದೀಪ್ `ದಬಾಂಗ್’ ಲುಕ್ ರಿವೀಲ್

ಮುಂಬೈ,ಅ.9-ಕಿಚ್ಚ ಸುದೀಪ್ `ದಬಾಂಗ್ 3’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಸುದೀಪ್ ದಬಾಂಗ್ಲುಕ್ ಅನ್ನು ಸಲ್ಮಾನ್ ಖಾನ್ ರಿವೀಲ್ ಮಾಡಿದ್ದಾರೆ.

ಟ್ವಿಟರ್ ಮೂಲಕ ಸುದೀಪ್ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. ಈ ಪೋಸ್ಟರ್ನಲ್ಲಿ ಸೂಟು ಧರಿಸಿರುವ ಕಿಚ್ಚ, ರಫ್ ಅಂಡ್ ಟಫ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಲುಕ್ಗೆ ಈಗಾಗ್ಲೇ ಲೈಕ್ಗಳ ಸುರಿಮಳೆ ಹರಿದು ಬಂದಿದೆ. ಸುದೀಪ್ ಲುಕ್ ಗೆ ಸಾಕಷ್ಟು ಪ್ರಶಂಸೆಗಳು ಕೇಳಿ ಬರುತ್ತಿವೆ. ಇನ್ನು ಕಿಚ್ಚ ಕೂಡ ಫೋಟೋವನ್ನು ಶೇರ್ ಮಾಡಿದ್ದು ಸಲ್ಮಾನ್ಖಾನ್ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ದಬಾಂಗ್ ಚಿತ್ರಕ್ಕೆ ಪ್ರಭುದೇವ ನಿರ್ದೇಶನ, ಸಾಜಿದ್ವಾಜಿದ್ ಸಂಗೀತ, ಸಲ್ಮಾನ್ಖಾನ್, ಅರ್ಬಾಜ್ ಖಾನ್ ಮತ್ತು ನಿಖಿಲ್ ದ್ವಿವೇದಿ ನಿರ್ಮಾಣವಿದೆ. ಇನ್ನು ತಾರಾಗಣದಲ್ಲಿ ಚುಲ್ಬುಲ್ ಪಾಂಡೆಯಾಗಿ ಸಲ್ಮಾನ್ಖಾನ್, ಸಿಕಂದರ್ ಭಾರಧ್ವಜ್ ಆಗಿ ಕಿಚ್ಚ ಸುದೀಪ್, ರಜ್ಜೋ ಪಾಂಡೆಯಾಗಿ ಸೋನಾಕ್ಷಿ ಸಿನ್ಹಾ ಸೇರಿದಂತೆ ಸಾಕಷ್ಟು ಪ್ರತಿಭಾನ್ವಿತ ಕಲಾವಿದರಿದ್ದಾರೆ. ಇದೇ ಡಿಸೆಂಬರ್ 20ಕ್ಕೆದಬಾಂಗ್-3′ ರಿಲೀಸ್ ಆಗುತ್ತಿದ್ದು, ಕಿಚ್ಚನನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾಯುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: