ದೇಶ

ರೈಲಿನಲ್ಲಿ ಬೆಂಕಿ: ಪ್ರಯಾಣಿಕರು ಅಪಾಯದಿಂದ ಪಾರು

ಮುಂಬೈ,ಅ.9- ವ್ಯಕ್ತಿಯೊಬ್ಪರು ವಿದ್ಯುತ್ ಚಾಲಿತ ರೈಲಿನ ಮೇಲಿರುವ ಕೇಬಲ್ ಮೇಲೆ ಬ್ಯಾಗ್ ವೊಂದನ್ನು ಬಿಸಾಡಿದ್ದರಿಂದ ರೈಲಿಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ನವೀ ಮುಂಬೈಯ ವಾಶಿ ರೈಲು ನಿಲ್ದಾಣದಲ್ಲಿ ನಡೆದಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಬೆಳಿಗ್ಗೆ 9.28ಕ್ಕೆ ಹೊರಡಬೇಕಿದ್ದ ರೈಲು 12 ನಿಮಿಷ ವಿಳಂಬವಾಗಿದೆ.

ಪನ್ವೇಲ್ ದಾರಿಯಾಗಿ ಸಾಗುವ ರೈಲು ವಾಶಿ ನಿಲ್ದಾಣಕ್ಕೆ ತಲುಪಿದಾಗ ವ್ಯಕ್ತಿಯೊಬ್ಬರು ವಿದ್ಯುತ್ ರೈಲಿನ ಮೇಲಿರುವ ಕೇಬಲ್‌ಗೆ ಬ್ಯಾಗ್ ಬಿಸಾಡಿದ್ದಾರೆ. ವಿದ್ಯುತ್ ತಂತಿಗೆ ಬ್ಯಾಗ್ ತಗುಲಿ ಬೆಂಕಿ ಹತ್ತಿಕೊಂಡಿದ್ದು ತಕ್ಷಣವೇ ಬೆಂಕಿ ನಂದಿಸಲಾಗಿದೆ. ಸುರಕ್ಷತೆಯ ನಿಟ್ಟಿನಲ್ಲಿ ಬೋಗಿಗಳನ್ನು ತೆಗೆಯಲಾಗಿದೆ ಎಂದು ಸೆಂಟ್ರಲ್ ರೈಲ್ವೆಯ ಹಿರಿಯ ಪಿಆರ್‌ಒ ಎಕೆ ಜೈನ್ ಹೇಳಿದ್ದಾರೆ.

ರೈಲು ವಿಳಂಬವಾದ ಕಾರಣ ಹೆಚ್ಚಿನ ಪ್ರಯಾಣಿಕರು ವಾಶಿ ನಿಲ್ದಾಣದಿಂದ ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಇನ್ನು ಕೆಲವರು ರೈಲು ಸಂಚಾರ ಪುನರಾರಂಭಗೊಳ್ಳುವವರಗೆ ಕಾದು ನಿಂತಿದ್ದರು. (ಎಂ.ಎನ್)

 

Leave a Reply

comments

Related Articles

error: