Uncategorized

ರಾಷ್ಟ್ರಮಟ್ಟದ ವಿಚಾರ ಸಂಕಿರಣ .11.

ಮೈಸೂರು.ಅ.9: ನಗರದ ಗೋಕುಲಂ ಮೂರನೇ ಹಂತದಲ್ಲಿನ ಕೆ. ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅ. 11 ರ ಬೆಳಗ್ಗೆ 9.30ಕ್ಕೆ ಭಾರತದಲ್ಲಿ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಅಭಿವೃದ್ಧಿ- ದೃಷ್ಟಿಕೋನ ವಿಷಯ ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಡಾ.ಎಂ. ಶಿವಲಿಂಗೇಗೌಡ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆ. ರತ್ನಪ್ರಭ ವರು ಉದ್ಘಾಟಿಸಲಿದ್ದು, ಗುಂಡಪ್ಪಗೌಡ ಅಧ್ಯಕ್ಷತೆ ವಹಿಸುವರು. ಪ್ರೊ.ಆರ್. ಮೂಗೇಶಪ್ಪ, ಡಾ.ಆರ್. ಇಂದಿರಾ, ಪಿ ವಿಶ್ವನಾಥ್, ಡಿ. ಸುಬ್ಬಯ್ಯ ಇನ್ನಿತರರು ಹಾಜರಿರುವರು.

ದೇಶದಲ್ಲಿ ಸ್ವಾತಂತ್ರ್ಯಾನಂತರ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗಿ ಬಂದಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರು ಮತ್ತು ಮಹಿಳೆಯರ ನಡುವೆ ಸೃಷ್ಟಿಯಾಗಿರುವ ಅಂತರ ಸಹಾ ಇವುಗಳಲ್ಲಿ ಒಂದಾಗಿದೆ.

ಹೀಗಾಗಿ ಮಹಿಳಾ ಸಬಲೀಕರಣ ಎಂದರೇನು, ಮೊದಲಾದ ವಿಷಯಗಳನ್ನು ಈ ವಿಚಾರ ಸಂಕಿರಣ ಒಳಗೊಳ್ಳಲಿದೆ ಎಂದು ತಿಳಿಸಿದರು.

ಪ್ರೊ. ಗೌಹರ್ ಫಾತಿಮಾ, ಡಾ.ಆರ್. ಲತಾಮಣಿ, ಸಂಘಟಕ ಗಿರೀಶ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: