ಪ್ರಮುಖ ಸುದ್ದಿಮೈಸೂರು

ಮೂರು ದಿನಗಳ ಶಸ್ತ್ರ ಚಿಕಿತ್ಸಕರ ಸಮ್ಮೇಳನ

ಮೈಸೂರು,ಅ.9: ಅಂತರ ರಾಷ್ಟ್ರೀಯ ಶಸ್ತ್ರ ಚಿಕಿತ್ಸಕರ ಕಾಲೇಜು ವತಿಯಿಂದ ಅ. 11 ರಿಂದ 13ರವರೆಗೆ  ನಗರದ ರಿಯೋ  ಮೆರಿಡಿಯನ್ ಹೊಟೇಲ್‌ನಲ್ಲಿ ಶಸ್ತ್ರ ಚಿಕಿತ್ಸಕರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿ ಡಾ.ಎಸ್.ಬಿ. ವಸಂತಕುಮಾಋ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ. ೧೧ ರಂದು ಸಂಜೆ ಅರಕ್ಕೆ ಉದ್ಘಾಟನೆ ನೆರವೇರಲಿದ್ದು, ಪ್ರೊ.ಕೆ.ಎಸ್. ರಂಗಪ್ಪ, ಇನ್ನಿತರರು ಹಾಜರಿರುವರು.

ಅ. 13 ರಂದು ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ಡಾ. ಚಂದ್ರಶೇಖರ್, ಪ್ರೊ. ಹೇಮಂತ್‌ಕುಮಾರ್ ಇನ್ನಿತರರು ಹಾಜರಿರುವವರು.

ಚೆನ್ನೈ, ಗುವಾಹಟಿ, ವಾರಣಾಸಿ ಮೊದಲಾದ ಕಡೆಗಳಿಂದಲೂ ಪ್ರತಿನಿಧಿಗಳು ಆಗಮಿಸಲಿದ್ದು, ಶಸ್ತ್ರ ಚಿಕಿತ್ಸಾ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆ, ಅಪರೂಪದ ಶಸ್ತ್ರ ಚಿಕಿತ್ಸೆ ಮೊದಲಾದವುಗಳ ಮಾಹಿತಿ ಹಂಚಿಕೊಳ್ಳಲಿದ್ದಾರೆಂದರು.

ಡಾ. ಸಂಜಯ್, ಚಂದನ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: