ಮೈಸೂರು

ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಗೆ ಸಿದ್ಧವಾಗಿದ್ದಾನಂತೆ ಅರ್ಜುನ್ !?

ಮೈಸೂರು,ಅ.9:- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ ನಿನ್ನೆ ಯಶಸ್ವಿಯಾಗಿ ಮುಗಿದಿದೆ. ಈ ನಡುವೆ ದಸರಾದಲ್ಲಿ ಪಾಲ್ಗೊಂಡಿದ್ದ ಕ್ಯಾಪ್ಟನ್ ಅರ್ಜುನ  ನೇತೃತ್ವದ ಗಜಪಡೆ ಇದೀಗ ಮತ್ತೊಂದು ಕಾರ್ಯಕ್ಕೆ ಸಿದ್ಧವಾಗಿದೆ.

ದಸರಾ ಮುಗಿದ ಬೆನ್ನಲ್ಲೇ  ಗಜಪಡೆ ಮತ್ತೊಂದು ಕಾರ್ಯಕ್ಕೆ ಸಿದ್ದವಾಗಿದ್ದು, ಗುಂಡ್ಲುಪೇಟೆ ತಾಲೂಕಿನಲ್ಲಿ ಕಾಣಿಸಿಕೊಂಡಿರುವ ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಗೆ ದಸರಾ ಆನೆಗಳು ಸಿದ್ಧವಾಗಿವೆ. ಹುಲಿ ಕಾರ್ಯಾಚರಣೆಗಾಗಿ ಮೂರು ಆನೆಗಳನ್ನು ಇಂದೇ ಕಳುಹಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ಕಾರ್ಯಾಚರಣೆಗಳ ರಾಜ ಅಭಿಮನ್ಯು ಜೊತಯಲ್ಲಿ ಕ್ಯಾಪ್ಟನ್ ಅರ್ಜುನ  ಹಾಗೂ ಮತ್ತೊಂದು ಆನೆ ಹುಲಿ ಕಾರ್ಯಾಚರಣೆಗೆ ಹೋಗುವುದು ಬಹುತೇಕ ಖಚಿತ ವಾಗಿದ್ದು, ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಚರ್ಚೆಯಲ್ಲಿ ತೊಡಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: