ಮೈಸೂರು

ವಿಕಲಚೇತನರಿಗೆ ಪ್ರೋತ್ಸಾಹ ಅಗತ್ಯ : ಸಬಿತಾ ಮೊನಿಸ್

ರೋಟರಿ ಮಿಡ್ ಟೌನ್ ಮೈಸೂರು ವತಿಯಿಂದ ಮೈಸೂರು ಒವೆಲ್ ಮೈದಾನದಲ್ಲಿ  ವಿಕಲಚೇತನರಿಗಾಗಿ  ಬಾಂಧವ್ಯ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.

ಕ್ರೀಡಾಕೂಟವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಸಬಿತಾ ಮೊನಿಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿಶೇಷ ಮಕ್ಕಳಿಗೆ ಈ ರೀತಿ ಕ್ರೀಡೆಯನ್ನು ಆಯೋಜಿಸುತ್ತಿರುವುದು ಸಂತಸದ ವಿಷಯ.  ಇವರಿಗೆ ಕ್ರೀಡೆಯ ಕುರಿತು ಏನೂ ತಿಳಿದಿರುವುದಿಲ್ಲ, ಕ್ರೀಡೆಯಲ್ಲಿ ಅವರನ್ನೂ ತೊಡಗಿಸಿ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಪ್ರೋತ್ಸಾಹಿಸಬೇಕು  ಎಂದರು.

ಇತ್ತೀಚಿನ ದಿನಗಳಲ್ಲಿ ವಿಕಲಚೇತನರು ಕೂಡ ಒಲಂಪಿಕ್ ನಲ್ಲಿ ಭಾಗವಹಿಸಿ ಸಾಧನೆಗೈದಿದ್ದಾರೆ. ಅವರಿಗೆ ಹೆತ್ತವರ ಪ್ರೋತ್ಸಾಹ ಅಗತ್ಯ ಎಂದು ಭಾವುಕರಾದರು.

ಕಾರ್ಯಕ್ರಮದಲ್ಲಿ  ಡಾ.ನಾಗಾರ್ಜುನ್ ಆರ್.ಎಸ್, ಅನಂತರಾಜ ಅರಸ್ ಕೆ.ಜಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೈಸೂರು ಜಿಲ್ಲೆಯ ವಿವಿಧ ವಿಕಲಚೇತನರ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: