ಲೈಫ್ & ಸ್ಟೈಲ್

ಈ ಐದು ವಸ್ತುಗಳು ಆರೋಗ್ಯದ ಜೊತೆಗೆ ತ್ವಚೆಯ ಕಾಳಜಿಯನ್ನೂ ವಹಿಸುತ್ತದೆ : ಅವಶ್ಯಕವಾಗಿ ಡಯಟ್ ನಲ್ಲಿ ಬಳಸಿಕೊಳ್ಳಿ !

ಆಧುನಿಕ ಯುಗದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು  ಜೀವನದಲ್ಲಿರುವ ಸವಾಲುಗಿಂತ ಕಡಿಮೆಯೇನಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮನ್ನು ತಾವು ಸದೃಢವಾಗಿಡಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಆರೋಗ್ಯದ ಹೊರತಾಗಿ, ಚರ್ಮವು ವಿಶೇಷವಾಗಿ ನಿಮ್ಮ ಮುಖದ ತ್ವಚೆಯು ವಿಶೇಷ ಕಾಳಜಿಯನ್ನು ಬಯಸುತ್ತದೆ. ಮಾಲಿನ್ಯ ಮತ್ತು ಬದಲಾಗುತ್ತಿರುವ ಹವಾಮಾನದ ಮಧ್ಯೆ, ನಾವು ಅನೇಕ ಉದ್ದೇಶಪೂರ್ವಕ ಚರ್ಮದ ಸಮಸ್ಯೆಗಳಿಗೆ ಬಲಿಯಾಗುತ್ತೇವೆ.   ಪಿಂಪಲ್, ಕಪ್ಪು ಚುಕ್ಕೆಗಳು, ನಿರಿಗೆಗಳು. ನೀವು ಸಹ ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನೀವು ಕೂಡ ಈ ವಸ್ತುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು, ಇದು ನಿಮ್ಮ ಆರೋಗ್ಯ ಮತ್ತು ಚರ್ಮ ಎರಡಕ್ಕೂ ಒಳ್ಳೆಯದು.

ನಿಂಬು

ನಿಂಬೆ ರಸವು ನಿಮ್ಮ ಹೊಟ್ಟೆಗೆ ಮಾತ್ರವಲ್ಲದೆ ಚರ್ಮಕ್ಕೂ ತುಂಬಾ ಪ್ರಯೋಜನಕಾರಿ. ಪ್ರತಿದಿನ ನಿಂಬೆ ಬೆರೆಸಿದ ನೀರು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಅಲ್ಲದೆ, ನಿಂಬೆ ರಸವನ್ನು  ನೀರು ಅಥವಾ ಗ್ಲಿಸರಿನ್ ಬೆರೆಸಿ ಮುಖಕ್ಕೆ ಹಚ್ಚಬಹುದು.

ಕಲ್ಲಂಗಡಿ

ಹೆಚ್ಚಿನ ಜನರು ಕಲ್ಲಂಗಡಿ ತಿನ್ನಲು ಇಷ್ಟಪಡುತ್ತಾರೆ. ಕಲ್ಲಂಗಡಿ ತಿನ್ನುವುದಷ್ಟೇ ಅಲ್ಲದೇ, ನೀವು ಅದರ ರಸವನ್ನು ಮುಖಕ್ಕೆ ಹಚ್ಚಬಹುದು.

ಹಾಲು

ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ನೀವು ಪ್ರತಿದಿನ ಕನಿಷ್ಠ ಎರಡು ಲೋಟ ಹಾಲು ಕುಡಿಯಬೇಕು. ಬೆಳಿಗ್ಗೆ ಮತ್ತು ರಾತ್ರಿ ನೀವು ಒಂದು ಲೋಟ ಹಾಲು ಕುಡಿಯಬಹುದು. ನೀವು ಕುದಿಸದೇ ಇರುವ ಹಾಲನ್ನು ಸಹ ಮುಖಕ್ಕೆ ಹಚ್ಚಿ ಕೆಲವು ಸಮಯ ಬಿಟ್ಟು ತೊಳೆಯುವುದರಿಂದ ಮುಖ ಕಾಂತಿಯುಕ್ತವಾಗುತ್ತದೆ.

ಮೊಸರು

ಮೊಸರಿನಿಂದ ತಯಾರಿಸಿದ ರಾಯತ ಅಥವಾ ಲಾಸ್ಸಿ ನಿಮ್ಮ ಜೀರ್ಣಕ್ರಿಯೆಯನ್ನು ಸರಿಯಾಗಿ ಇಡುತ್ತದೆ. ಮೊಸರನ್ನು ಅಕ್ಕಿ ಹಿಟ್ಟು ಅಥವಾ ಕಡಲೆ  ಹಿಟ್ಟಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಬಹುದು. ಇದು ನಿಮ್ಮ ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕುತ್ತದೆ.

ಸೇಬು

ನಿಮ್ಮ ಊಟದಲ್ಲಿ ನೀವು ಪ್ರತಿದಿನ ಸೇಬನ್ನು ಸೇರಿಸಬೇಕು. ಅಲ್ಲದೆ, ನೀವು ಸೇಬನಿಂದ ತೆಗೆದ ರಸವನ್ನು ಮುಖಕ್ಕೆ ಹಚ್ಚಬಹುದು.   ವಿನೆಗರ್ ನಂತೆ ಕಾರ್ಯನಿರ್ವಹಿಸಲಿದ್ದು,  ಇದು ಮುಖಕ್ಕೆ ತುಂಬಾ ಒಳ್ಳೆಯದು. (ಎಸ್.ಎಚ್)

Leave a Reply

comments

Related Articles

error: