ಮನರಂಜನೆ

ಸ್ಯಾಂಡಲ್ ವುಡ್ ತಾರೆಯರ ಫೇಸ್ ಬುಕ್ ಅಕೌಂಟ್ ಹ್ಯಾಕ್

ಬೆಂಗಳೂರು,ಅ.9-ಸ್ಯಾಂಡಲ್ ವುಡ್ ತಾರೆಯರ ಫೇಸ್ ಬುಕ್ ಅಕೌಂಟ್ ಹ್ಯಾಕ್ ಆಗಿದ್ದು, ಹ್ಯಾಕ್ ಆಗಿರುವ ಖಾತೆಯಿಂದ ಅಸಭ್ಯವಾದ ಪೋಸ್ಟ್ ಗಳನ್ನ ಹಾಕಲಾಗುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ರಾಬರ್ಟ್ ಚಿತ್ರದಲ್ಲಿ ನಟಿಸುತ್ತಿರುವ ಆಶಾ ಭಟ್, ಸಂಗೀತ ನಿರ್ದೇಶಕ ಚೇತನ್ ಸೋಸ್ಕಾ ಸೇರಿದಂತೆ ಇನ್ನು ಹಲವು ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗಿದೆ.

ಸಂಗೀತ ನಿರ್ದೇಶಕ ಚೇತನ್ ಸೋಸ್ಕಾ ಅವರ ಅಧಿಕೃತವಾದ ಫೇಸ್ ಬುಕ್ ಖಾತೆ ಬಾಂಗ್ಲಾದೇಶಿಗರಿಂದ ಹ್ಯಾಕ್ ಆಗಿದೆಯಂತೆ. ಚೇತನ್ ಅವರ ಅಧಿಕೃತ ಖಾತೆ ಹ್ಯಾಕ್ ಮಾಡಿ, ಅದರಲ್ಲಿ ಅಸಭ್ಯವಾದ ಪೋಸ್ಟ್ ಗಳನ್ನ ಹಾಕಲಾಗುತ್ತಿದೆಯಂತೆ. ಈ ಬಗ್ಗೆ ಸ್ವತಃ ಚೇತನ್ ಅವರೇ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಫಾಲೋವರ್ಸ್ ಮತ್ತು ಜನಸಾಮಾನ್ಯರು ಎಚ್ಚರಿಕೆಯಿಂದಿರಿ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ನಟಿ ಆಶಾ ಭಟ್ ಅವರ ಟ್ವಿಟ್ಟರ್, ಇನ್ಸ್ಟಾಗ್ರಾಂ ಹ್ಯಾಕ್ ಆಗಿತ್ತು. ಈ ವಿಷಯವನ್ನ ಸ್ವತಃ ಆಶಾ ಭಟ್ ಅವರೇ ಬಹಿರಂಗಪಡಿಸಿದ್ದರು. ಟರ್ಕಿಶ್ ಗುಂಪು ಆಶಾ ಭಟ್ ಅವರ ಖಾತೆಯನ್ನ ಹ್ಯಾಕ್ ಮಾಡಿದ್ದರು ಎಂದು ಹೇಳಿಕೊಂಡಿದ್ದರು.

ಪೈಲ್ವಾನ್ ಚಿತ್ರದ ಪೈರಸಿಗೆ ಸಂಬಂಧಿಸಿದಂತೆ ಹೆಚ್ಚು ಸುದ್ದಿಯಲ್ಲಿದ್ದ ಸಂದರ್ಭದಲ್ಲಿ ನಟ ಸುದೀಪ್ ಅವರ ಟ್ವಿಟ್ಟರ್ ಖಾತೆಯನ್ನ ಹ್ಯಾಕ್ ಮಾಡುವ ಪ್ರಯತ್ನ ಆಗಿತ್ತಂತೆ. ಆದರೆ, ಅದು ಸಫಲವಾಗಲಿಲ್ಲ. ಆ ಬಗ್ಗೆಯೂ ಸೈಬರ್ ಕ್ರೈಂ ಪೋಲಿಸರಿಗೆ ಮಾಹಿತಿ ಕೂಡ ನೀಡಲಾಗಿತ್ತಂತೆ.

ಭರತ್ ಅನೇ ನೇನು, ಕಬೀರ್ ಸಿಂಗ್ ಅಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಕಿಯಾರ ಅಡ್ವಾನಿ ಅವರ ಸೋಶಿಯಲ್ ಮೀಡಿಯಾ ಖಾತೆಯೂ ಹ್ಯಾಕ್ ಆಗಿತ್ತು. (ಎಂ.ಎನ್)

Leave a Reply

comments

Related Articles

error: