ಸುದ್ದಿ ಸಂಕ್ಷಿಪ್ತ

ಟೊಮ್ಯಾಟೋ ಅಂಗಮಾರಿ ರೋಗ ಕುರಿತಂತೆ ಮಾಹಿತಿ

ಮಂಡ್ಯ (ಅ.9): ಪ್ರಸ್ತಕ ಮಾಸದಲ್ಲಿ ಟೊಮ್ಯಾಟೋ ಬೆಳೆಯಲ್ಲಿ ಕಂಡು ಬರುವ ಅಂಗಮಾರಿ ರೋಗದ ಸಮಸ್ಯೆಯು ಹೆಚ್ಚಾಗುತ್ತಿರುವುದರಿಂದ ರೈತರು ಸಮಸ್ಯೆ ಕುರಿತಂತೆ ಗಮನಹರಿಸಬೇಕಾಗಿದೆ.

ಈ ರೋಗವು ಸಣ್ಣ, ಸಣ್ಣ ಚುಕ್ಕಿಗಳು ಎಲೆಯ ಮೇಲ್ಬಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಎಲೆಯ ಕಾಂಡದಲ್ಲಿಯೂ ಕಂಡು ಬರುತ್ತದೆ. ಎಲೆಯ ಕೆಳಗೆ ಬಿಳಿ ಬಣ್ಣದ ಶಿಲೀಂದ್ರದ ಬೆಳವಣಿಗೆ ಕಂಡು ಬರುತ್ತದೆ. ಈ ರೋಗವು ಮಳೆಗಾಲದಲ್ಲಿ ಹೆಚ್ಚು ಕಂಡು ಬರುತ್ತದೆ.

ನಂತರದ ದಿನಗಳಲ್ಲಿ ಹಣ್ಣಿನ ಮೇಲೆ ರೋಗದ ಲಕ್ಷಣ ಕಾಣಬಹುದು ಈಗಾಗೀ ಟೊಮ್ಯಾಟೋ ಬೆಳೆಯ ಪ್ರಾರಂಭದಲ್ಲಿ ಅಂಗಮಾರಿ ರೋಗ ಕಂಡು ಬಂದಲ್ಲಿ 2 ಗ್ರಾಂ ಮ್ಯಾಂಕೊಜೆಬ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ 15 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: