ಸುದ್ದಿ ಸಂಕ್ಷಿಪ್ತ

ಅ.11ರಿಂದ ವನ್ಯಜೀವಿ ಸಂಭ್ರಮ

ಮೈಸೂರು,ಅ.9 : ಭರಣಿ ಆರ್ಟ್ ಗ್ಯಾಲರಿಯ ಬೆಳ್ಳಿ ಹಬ್ಬದ ಅಂಗವಾಗಿ ವನ್ಯಜೀವಿ ಸಂಭ್ರಮ ಸಪ್ತಾಹ ಆಯೋಜಿಸಿದ್ದು, ಅ.11ರಿಂದ 13ರವರೆಗೆ ಬೆಳಗ್ಗೆ 11 ರಿಂದ 7ರವರೆಗೆ ವಿವೇಕಾನಂದನಗರದ ಭರಣಿ ಆರ್ಟ್ ಗ್ಯಾಲರಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ವನ್ಯಜೀವಿ ಛಾಯಾಗ್ರಾಹಕ ಎಸ್.ರಾಮಪ್ರಸಾದ್ ಅವರ ಛಾಯಾಚಿತ್ರಗಳ ಪ್ರದರ್ಶನಕ್ಕೆ ವಿಶ್ರಾಂತ ಕುಲಪತಿ ಡಾ.ಎಸ್.ಎನ್.ಹೆಗ್ಡೆ ಚಾಲನೆ ನೀಡುವರು. ಎ.ಸಿ.ಲಕ್ಷ್ಮಣ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಭರಣಿ ಆರ್ಟ್ ಗ್ಯಾಲರಿಯ ಕಾವೇರಪ್ಪ ಹಾಗೂ ಇತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: