ಸುದ್ದಿ ಸಂಕ್ಷಿಪ್ತ

ಅ.11 ರಂದು ಬಹಿರಂಗ ಹರಾಜು

ಮಂಡ್ಯ (ಅ.9): ಮಂಡ್ಯ ಜಿಲ್ಲಾ ನೋಂದಣಾಧಿಕಾರಿ ಅವರ ವಾಹನ ಸಂಖ್ಯೆ ಕೆಎ19ಜಿ42 ವಾಹನವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಪಾಸಣೆ ಮಾಡಿ ಸದರಿ ವಾಹನವು 1992ರ ಮಾಡೆಲ್ ವಾಹನವಾಗಿದ್ದು, ಸುಮಾರು 29ವರ್ಷದ ಹಳೆಯದಾಗಿದ್ದು ಒಟ್ಟು 2 ಲಕ್ಷ ಕಿ.ಮೀ ಮೇಲ್ಪಟ್ಟು ಕ್ರಮಿಸಿರುವುದರಿಂದ ವಾಹನಕ್ಕೆ ದೊಡ್ಡ ಪ್ರಮಾಣದ ದುರಸ್ಥಿ ಅವಶ್ಯಕತೆ ಇರುತ್ತದೆ. ವಾಹನವು ಈಗಿರುವ ಸ್ಥಿತಿಯಲ್ಲಿ ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಿದರೆ ವಾಹನದ ಅಂದಾಜು ಮೌಲ್ಯ 45 ಸಾವಿರಗಳಾಗಬಹುದು, ಸದರಿ ವಾಹನವನ್ನು ಅಕ್ಟೋಬರ್ 11 ಬಹಿರಂಗ ಹರಾಜು ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.

(ಎನ್.ಬಿ)

Leave a Reply

comments

Related Articles

error: