ಸುದ್ದಿ ಸಂಕ್ಷಿಪ್ತ

ಅಂಚೆ ಏಜೆಂಟರಿಗಾಗಿ ನೇರ ಸಂದರ್ಶನ

ಮಂಡ್ಯ (ಅ.9): ಅಂಚೆ ಅಧೀಕ್ಷಕರು, ಮಂಡ್ಯ ವಿಭಾಗ, ಅವರು ಅಂಚೆ ಜೀವ ವಿಮೆ ಅಥವಾ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳ ಮಾರಾಟ ಮಾಡಲು ಹೆಸರು ಸೇರ್ಪಡೆ ಅಥವಾ ಏಜೆಂಟರುಗಳನ್ನು ತೊಡಗಿಸಿಕೊಳ್ಳಲು ನೇರ ಸಂದರ್ಶನ ನಡೆಸುವರು.

ಆಸಕ್ತ ಅಭ್ಯರ್ಥಿಗಳು ಅಂಚೆ ಅಧೀಕ್ಷಕರ ಕಚೇರಿ ಮಂಡ್ಯ ಇವರ ಕಚೇರಿಯಲ್ಲಿ ಆಕ್ಟೋಬರ್ 18 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ಹಾಜರಾಗಬಹುದು ಹಾಗೂ ಅಂಚೆ ಜೀವ ವಿಮೆ ಉತ್ಪನ್ನಗಳ ಮಾರಾಟ ಕೇವಲ ಮಂಡ್ಯ ಜಿಲ್ಲೆಗೆ ಸೀಮಿತವಾಗಿದ್ದು, ಬೇರೆ ಸ್ಥಳಗಳಿಂದ ಅಭ್ಯರ್ಥಿಗಳು ಹಾಜರಾಗಬೇಕಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08232-220534/220651 ಮೊಬೈಲ್ ಸಂಖ್ಯೆ ಲಕ್ಷ್ಮೀ ನಾರಾಯಣ 9449021312 ಅವರನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: