
ಮೈಸೂರು
ಬೆಳದಿಂಗಳ ಸಂಗೀತದಲ್ಲಿ ‘ಅಭಿರಾಮ್ ಬೋಡೆ’
ಮೈಸೂರು.ಅ.9 : ಚಾಮುಂಡಿ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಜರುಗಲಿರುವ ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ಕ್ಷೇತ್ರದ ಪ್ರತಿಭಾವಂತ ವಿದ್ವಾನ್ ಅಭಿರಾಮ್ ಬೋಡೆಯವರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.
ಇದೇ ಅ.13 ಸಂಜೆ 6 ಗಂಟೆಗೆ ಮಠದ ಆವರಣದಲ್ಲಿ ನಡೆಯುವ 217ನೇಯ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಸಾನಿಧ್ಯ ವಹಿಸುವರು.
ಅಭಿರಾಮ್ ಬೋಡೆಯವರು ವಿದುಷಿ ಆರ್.ಎ.ರಮಾಮಣಿ ಬಳಿ ಶಿಷ್ಯ ವೃತ್ತಿ ಮಾಡುತ್ತಿದ್ದು ಪ್ರಸ್ತುತ ಸಂಗೀತದಲ್ಲಿ ಎಂ.ಎ. ಅಧ್ಯಯನ ನಡೆಸುತ್ತಿದ್ದಾರೆ. ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಪ್ರಸ್ತುತ ಪಡಿಸಿದ್ದು, ಅನನ್ಯ ನಾದಜ್ಯೋತಿ ಪ್ರತಿಭಾ ಪುರಸ್ಕಾರ, ನಾದಕಿಶೋರೋತ್ಸವ ಸಂಗೀತ ಸ್ಪರ್ಧೆಯ ಅತ್ಯುತ್ತಮ ಸಂಗೀತಗಾರ ಪ್ರಶಸ್ತಿ ಹಲವು ಪ್ರಶಸ್ತಿಗೆ ಪಾತ್ರರಾಗಿರುವರು. ಇವರೊಂದಿಗೆ ವಿದ್ವಾನ್ ವೈಭವ್ ರಮಣಿಯ ವಯೋಲಿನ್ ನಲ್ಲಿ ಸಾಥ್ ನೀಡಲಿದ್ದಾರೆ. (ಕೆ.ಎಂ.ಆರ್)